ವಚನ ಸಾಹಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಲಿ

ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ರೂಪಾ ರಜಪೂತ ಅವರಿಗೆ ಕೋ. ಚನ್ನಬಸಪ್ಪ ರಾಜ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಸಿಂಪೀರ ವಾಲಿಕಾರ, ಜಿ.ಎಸ್ ಬಳ್ಳೂರ, ಕೆ.ಎಸ್. ಹಣಮಾಣಿ ಮತ್ತಿತರರಿದ್ದಾರೆ.
ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ರೂಪಾ ರಜಪೂತ ಅವರಿಗೆ ಕೋ. ಚನ್ನಬಸಪ್ಪ ರಾಜ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಸಿಂಪೀರ ವಾಲಿಕಾರ, ಜಿ.ಎಸ್ ಬಳ್ಳೂರ, ಕೆ.ಎಸ್. ಹಣಮಾಣಿ ಮತ್ತಿತರರಿದ್ದಾರೆ.
Published on
ವಿಜಯಪುರ: ವಚನ ಸಾಹಿತ್ಯವನ್ನು ಕೇವಲ ಬೋಧನೆ ಮತ್ತು ಅಧ್ಯಯನಕ್ಕೆ ಸೀಮಿತಗೊಳಿಸದೇ ಅದರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಕಸಾಪ ಜಿಲ್ಲಾ ಗೌರವಾಧ್ಯಕ್ಷೆ ಭಾರತಿ ಪಾಟೀಲ ಬಣ್ಣಿಸಿದರು.
ನಗರದ ಕಸಾಪ ಸಭಾಂಗಣದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ನಡೆದ ದತ್ತಿಗೋಷ್ಠಿ ಹಾಗೂ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಚನ ಸಾಹಿತ್ಯ ಇಂದು ವಿಶ್ವಮಾನ್ಯ ಸಾಹಿತ್ಯವಾಗಿ ಹೊರಹೊಮ್ಮುವ ಮೂಲಕ ಶರಣರು ನಡೆ-ನುಡಿ ಒಂದಾಗಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಎಂಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರವಿಶಂಕರ ಹೂಗಾರ ಮಾತನಾಡಿ, ಯುವಜನರ ಮನಸ್ಸಿನಲ್ಲಿ ಶರಣರ ತತ್ವಗಳನ್ನು ಬಿತ್ತುವಲ್ಲಿ ಇದೊಂದು ದತ್ತಿಗೋಷ್ಠಿಗಳು ಅರ್ಥಪೂರ್ಣ ಕಾರ್ಯಕ್ರಮಗಳು ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಾಧವ ಗುಡಿ ವಚನ ಸಾಹಿತ್ಯದ ಅತ್ಯಗತ್ಯ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾನವೀಯ ಮೌಲ್ಯಗಳು ಹಾಗೂ ನೈತಿಕ ತಳಹದಿಯ ಮೇಲೆ ರೂಪಗೊಂಡ ವಚನ ಸಾಹಿತ್ಯ ಇಂದು ನಮ್ಮೆಲ್ಲರ ಬದುಕಿಗೆ ಆಧಾರಸ್ಥಂಭವಾಗಿವೆ. ಆರೋಗ್ಯಕರ ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಒಳಗೊಂಡಿರುವ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಆಡಳಿತಗಾರನಾಗಿರಲು ವಚನ ಸಾಹಿತ್ಯದ ಅಧ್ಯಯನ ಹಾಗೂ ಅದರ ಪಾಲನೆಯು ಇಂದು ತುಂಬಾ ಅಗತ್ಯವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಬಂದೇನವಾಜ ಅವಟಿ ಮಾತನಾಡಿ, ಕಸಾಪ ಜಿಲ್ಲಾ ಘಟಕವು ನಾಡು ನುಡಿ, ನೆಲ-ಜಲ ಭಾಷೆಯ ಉಳಿವಿನ ನಿಟ್ಟಿನಲ್ಲಿ ಹಲವು ಉದಯೋನ್ಮುಖ ಕವಿಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ರಮೇಶ ಬೋಜಪ್ಪ ದೇಸಾಯಿ, ವಿಜಯಲಕ್ಷಿ÷್ಮ ಹಳಕಟ್ಟಿ ವೇದಿಕೆಯಲ್ಲಿದ್ದರು. ಸುನಂದಾ ಕೋರಿ ಪ್ರಾರ್ಥಿಸಿದರು. ಪರವೀನಬಾನು ಶೇಖ ಸ್ವಾಗತಿಸಿದರು. ರಿಯಾಜ್ ಪಿಂಜಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಸುಖದೇವಿ ಅಲಬಾಳಮಠ ವಂದಿಸಿದರು. ಗ್ರಾಮೀಣ ಭಾಗದ ಮಹಿಳಾ ಸಾಹಿತಿಗಳಿಗೆ ನೀಡುವ ೨೦೨೬ನೇ ಸಾಲಿನ ಕೋ. ಚನ್ನಬಸಪ್ಪ ರಾಜ್ಯ ದತ್ತಿ ಪ್ರಶಸ್ತಿಯನ್ನು ರೂಪಾ ರಜಪೂತ ಅವರಿಗೆ ನೀಡಿ ಪುರಸ್ಕರಿಸಲಾಯಿತು.
ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಜಿ.ಎಸ್ ಬಳ್ಳೂರ, ಕೆ.ಎಸ್. ಹಣಮಾಣಿ, ಟಿ.ಆರ್. ಹಾವಿನಾಳ, ರುದ್ರಮ್ಮ ಗಿಡ್ಡಪ್ಪಗೋಳ, ಶ್ರೀಕಾಂತ ನಾಡಗೌಡ, ಬಸನಗೌಡ ಬಿರಾದಾರ, ಶಾಂತಾ ವಿಭೂತಿ, ಭಾಗೀರಥಿ ಸಿಂಧೆ, ಲತಾ ವಾಲೀಕಾರ, ಗಂಗಮ್ಮ ರಡ್ಡಿ, ಬಾಬು ಲಮಾಣಿ, ಬಸವರಾಜ ಕೋನರಡ್ಡಿ, -Àಕ್ರುದ್ದೀನ ಅಲಿಅಹ್ಮದ ಹಿರೇಕೊಪ್ಪ, ಮಹಾದೇವಿ ತೆಲಗಿ, ಯಲಗೂರಪ್ಪ ಬೂದಿಹಾಳ, ಎಸ್.ಕೆ. ಪಾಟೀಲ, ಆರ್.ಎಂ. ದೊಡಮನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net