ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲಿ

 ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಇಂಡಿ ಪಟ್ಟಣದಲ್ಲಿ ಸೋಮವಾರ ತಹಸೀಲ್ದಾರ  ಬಿ.ಎಸ್. ಕಡಕಭಾವಿ ಮುಖಾಂತರ ಸರ್ಕಾರಕ್ಕೆ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ದಸ್ತಗೀರ್ ಇನಾಮದಾರ, ರಿಯಾಜ್ ಕೋರಬೊ, ಅಬ್ದುಲ್ ಚಂದನ ವಾಲೆ ಮತ್ತಿತರರಿದ್ದರು.
ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಇಂಡಿ ಪಟ್ಟಣದಲ್ಲಿ ಸೋಮವಾರ ತಹಸೀಲ್ದಾರ ಬಿ.ಎಸ್. ಕಡಕಭಾವಿ ಮುಖಾಂತರ ಸರ್ಕಾರಕ್ಕೆ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ದಸ್ತಗೀರ್ ಇನಾಮದಾರ, ರಿಯಾಜ್ ಕೋರಬೊ, ಅಬ್ದುಲ್ ಚಂದನ ವಾಲೆ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿಯಿಂದ ತಹಸೀಲ್ದಾರ್‌ರಿಗೆ ಮನವಿ
  • ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಅವರ ಮುಖಾಂತರ ಸರ್ಕಾರಕ್ಕೆ
ಇಂಡಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಸೋಮವಾರ ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಅವರ ಮುಖಾಂತರ ಸರ್ಕಾರಕ್ಕೆ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ರ‌್ಯಾಲಿ ಪ್ರಾರಂಭಿಸಿ ಬಸವೇಶ್ವರ ವೃತ್ತದ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತಲುಪಿ ಮನವಿ ಸಲ್ಲಿಸಿ, ಯುವ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಿ.ಡಿ. ಇನಾಮದಾರ ಮಾತನಾಡಿ, ಭಾರತ ದೇಶವು ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ. ದೇಶದಲ್ಲಿ ಪ್ರತಿಯೊಂದು ಜೀವಿ, ಪ್ರಕೃತಿಗೂ ತನ್ನದೇಯಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಅದರಲ್ಲಿಯೂ ಮುಖ್ಯವಾಗಿ ಗೋವು (ಹಸು) ಭಾರತೀಯ ಸಂಸ್ಕೃತಿ, ಕೃಷಿ ಪ್ರಧಾನ ಆರ್ಥಿಕತೆ ಮತ್ತು ಕೋಟ್ಯಂತರ ಜನರ ಭಾವನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದರು.
ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದೆ. ಶಾಂತಿ, ಕರುಣೆ ಮತ್ತು ಪೋಷಣೆಯ ಸಂಕೇತವಾಗಿರುವ ಹಸುವನ್ನು ಭಾರತದ ರಾಷ್ಟ್ರಪ್ರಾಣಿ ಎಂದು ಘೋಷಿಸುವುದು ಸೂಕ್ತ ಮತ್ತು ಗೌರವದ ವಿಷಯವಾಗಿದೆ. ದೇಶದ ಸಾಂಸ್ಕೃತಿಕ ಐಕ್ಯತೆ ಮತ್ತು ಜೀವ ವೈವಿಧ್ಯತೆಯ ಮೇಲಿರುವ ಗೌರವವನ್ನು ಮತ್ತಷ್ಟು ಎತ್ತಿ ಹಿಡಿಯುತ್ತದೆ. ಆ ಕಾರಣದಿಂದ ಕೂಡಲೇ ಸರ್ಕಾರ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದರು.
ಉಪಾಧ್ಯಕ್ಷ ದಸ್ತಗೀರ್ ಇನಾಮದಾರ, ರಿಯಾಜ್ ಕೋರಬೊ, ಅಬ್ದುಲ್ ಚಂದನ ವಾಲೆ, ಮಹೇಬೂಬ ಕುಳ್ಳಕುಮಟಗಿ, ಬಿಲಾಲ್ ಡಾಂಗೆ, ಮುಸ್ತಾ ಇನಾಮದಾರ, ರಸೂಲ ಮಾಶಾಳಕರ, ದಸ್ತಗೀರ ಗಾಲಿಬವಾಲೆ, ಕಾನೂನು ಸಲಹೆಗಾರ ಎಂ.ಬಿ. ಮಾಣಿಕ, ಹಿರಿಯ ಮುಖಂಡ ಎಂ.ಎಲ್. ದೇವೂರ, ಸಾದಿಕಾ ಕುಳ್ಳಕುಮಟಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net