ಅಽಕಾರಿಗಳು ಸಮಸ್ಯೆ ಆಲಿಸಿ ನೀರು ಹರಿಸಲಿ

ಇಂಡಿಯ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಽಕಾರಿಗಳು ಹಾಗೂ ಸ್ಥಳೀಯ ರೈತರು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.  ಗುರಪ್ಪ ಅಗಸರ, ಕೆಂಚಪ್ಪ ನಿಂಬಾಳ, ಬಾಳು ಕೊಟಗೊಂಡ, ಸುರೇಶ ಜೇವೂರ ಮತ್ತಿತರರಿದ್ದರು.
ಇಂಡಿಯ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಽಕಾರಿಗಳು ಹಾಗೂ ಸ್ಥಳೀಯ ರೈತರು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಗುರಪ್ಪ ಅಗಸರ, ಕೆಂಚಪ್ಪ ನಿಂಬಾಳ, ಬಾಳು ಕೊಟಗೊಂಡ, ಸುರೇಶ ಜೇವೂರ ಮತ್ತಿತರರಿದ್ದರು.
Published on

ಇಂಡಿ:

ತಾಲೂಕಿನ ಹಿರೇರೂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಜನ ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಗುತ್ತಿ ಬಸವಣ್ಣ ಕಾಲುವೆಗೆ ತಕ್ಷಣವೇ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಽಕಾರಿಗಳು ಹಾಗೂ ಸ್ಥಳೀಯ ರೈತರು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ರೈತ ಮುಖಂಡ ಗುರಪ್ಪ ಅಗಸರ ಮಾತನಾಡಿ, ಈ ಭಾಗದಲ್ಲಿ ಸಮರ್ಪಕ ನೀರಾವರಿ ಸೌಲಭ್ಯವಿಲ್ಲದೆ ರೈತರು ಪ್ರತಿ ವರ್ಷವೂ ಕಣ್ಣೀರು ಹಾಕುವಂತಾಗಿದೆ. ಈಗಾಗಲೇ ತಾಂಬಾ ಗ್ರಾಮದವರೆಗೆ ನೀರು ಬಂದಿದ್ದರೂ, ಮುಂದಿನ ಹಳ್ಳಿಗಳಿಗೆ ತಲುಪಿಸುವಲ್ಲಿ ಅಽಕಾರಿಗಳು ಉದಾಸೀನತೆ ತೋರುತ್ತಿದ್ದಾರೆ. ನೀರಾವರಿ ಕಾಲುವೆಗಳ ನಿರ್ವಹಣೆ ಸಮರ್ಪಕವಾಗಿ ನಡೆಯದಿದ್ದರೆ ಕೃಷಿ ನಂಬಿದ ರೈತ ಕುಟುಂಬಗಳು ಬೀದಿಗೆ ಬೀಳಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಂಚಪ್ಪ ನಿಂಬಾಳ ಮಾತನಾಡಿ, ಸಮಯಕ್ಕೆ ಸರಿಯಾಗಿ ಕಾಲುವೆಗೆ ನೀರು ಬಿಡದಿದ್ದರೆ ರೈತರು ದುಬಾರಿ ಹಣ ತೆತ್ತು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾದ ದುಸ್ಥಿತಿ ಇದೆ. ನೀರಾವರಿ ಯೋಜನೆಗಳು ಕೇವಲ ಕಾಗದದ ಮೇಲಿರಬಾರದು, ಕೊನೆಯ ಭಾಗದ ಹಳ್ಳಿಗಳಿಗೂ ತಲುಪಬೇಕು. ತಕ್ಷಣ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರೆಲ್ಲರೂ ಒಟ್ಟಾಗಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರಾದ ಬಾಳು ಕೊಟಗೊಂಡ, ಸುರೇಶ ಜೇವೂರ, ಬಸವರಾಜ ಹಂಜಗಿ, ರಮೇಶ್ ದಳವಾಯಿ, ಶ್ರೀಶೈಲ ಮಡಿವಾಳ, ಶರಣಪ್ಪ ಗುಂದಗಿ, ಜಟ್ಟಪ್ಪ ನರಳೆ, ಕೆಂಚಪ್ಪ ಹಲಸಗಿ, ಲಾಯಪ್ಪ ಉಪ್ಪಾರ, ಭೀಮ ಯಳಸಂಗಿ, ನವೀನ್ ತಳವಾರ, ಚಂದ್ರಯ್ಯ ಮಠಪತಿ, ವಿಠೋಬಾ ಲಚ್ಯಾಣ, ಆರ್.ಕೆ. ತಾಂಬೆ, ಭೀಮಣ್ಣ ಜೇವೂರ, ಭೀರಪ್ಪ ಗೊಡೆಕರ, ಜಕ್ಕಪ್ಪ ಉಪ್ಪಾರ, ಜಟ್ಟಪ್ಪ ದಳವಾಯಿ, ಸಿದ್ದಪ್ಪ ಕರಂಡೆ, ಮಾದು ನರಳೆ, ಶರಣಪ್ಪ ಮಿರಗಿ, ಯಶವಂತ ಕಟ್ಟಿಮನಿ, ಭೀರಪ್ಪ ಬೊಳೆಗಾಂವ, ಚಿನ್ನಪ್ಪ ಮಸಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net