ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಯಲಿ

ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ವತಿಯಿಂದ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ವೃದ್ಧಾಶ್ರಮ ನಿವಾಸಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಶಕುಂತಲಾ ಪಾಟೀಲ, ಭಕ್ತಿ ಮಹೀಂದ್ರಕರ, ಎಚ್.ಎಸ್. ದೇಸಾಯಿ ಮತ್ತಿತರರಿದ್ದಾರೆ.

Published on
ವಿಜಯಪುರ: ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಸಂಯುಕ್ತಾಶ್ರಯದಲ್ಲಿ ನಗರ ಹೊರ ವಲಯದ ಶಶಿಧಾಮ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ವಿಶ್ವ ರೆಡ್ ಕ್ರಾಸ್ ದಿನ ಆಚರಿಸಲಾಯಿತು.
ಪ್ರಾಚಾರ್ಯ ಡಾ. ವೈ.ತಮ್ಮಣ್ಣ ಅವರ ಮಾರ್ಗದರ್ಶನ ಮತ್ತು ಯುನೈಟೆಡ್ ಇನ್ ಹ್ಯೂಮ್ಯಾನಿಟಿ ಎಂಬ ಧ್ಯೇಯದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಬ್ಬರು ದಯೆ ಮತ್ತು ಕರುಣೆಯ ಮನೋಭಾವ ಹೊಂದುವುದು ಕಾರ್ಯಕ್ರಮದ ಗುರಿಯಾಗಿತ್ತು. ಕಾರ್ಯಕ್ರಮವು ವೃದ್ಧ ನಿವಾಸಿಗಳಿಗೆ ಸಂತಸ ನೀಡಿದ್ದಲ್ಲದೆ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸಹಕಾರಿಯಾಯಿತು.
ವಿದ್ಯಾರ್ಥಿಗಳು ಶಶಿಧಾಮದಲ್ಲಿರುವ ವೃದ್ಧರಿಗೆ ಹಣ್ಣುಗಳನ್ನು ನೀಡಿದರು. ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜನಾಽಕಾರಿ ಶಕುಂತಲಾ ಪಾಟೀಲ, ಐಕ್ಯೂಎಸಿ ಸಂಯೋಜಕಿ ಭಕ್ತಿ ಮಹೀಂದ್ರಕರ, ಎಚ್.ಎಸ್. ದೇಸಾಯಿ, ಶ್ವೇತಾ ತಡವಲಗಿ, ಚಂದ್ರಕಲಾ ದೊಡಮನಿ, ಸೋಮಶೇಖರ ತುಪ್ಪದ, ಶಂಕರಲಿಂಗ ಕಡೂರು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net