ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಲಿ

ವಿಜಯಪುರದ ವಿ.ಭ. ದರಬಾರ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಉತ್ಸವದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ವಿರೇಶ, ವಿ.ಕೆ. ಗುಜರಿ, ಜಯಶ್ರೀ ಪಾಟೀಲ ಮತ್ತಿತರರಿದ್ದಾರೆ.
ವಿಜಯಪುರದ ವಿ.ಭ. ದರಬಾರ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಉತ್ಸವದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ವಿರೇಶ, ವಿ.ಕೆ. ಗುಜರಿ, ಜಯಶ್ರೀ ಪಾಟೀಲ ಮತ್ತಿತರರಿದ್ದಾರೆ.
Published on
ವಿಜಯಪುರ : ಪ್ಲಾಸ್ಟರ್ ಆ-ï ಪ್ಯಾರಿಸ್‌ನಿಂದ ತಯಾರಿಸಿದ ಗಣೇಶನ ವಿಗ್ರಹದ ಬದಲು ಮಣ್ಣಿನ ಗಣಪನನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಽಕಾರಿ ವೀರೇಶ ಸಲಹೆ ನೀಡಿದರು.
ನಗರದ ವಿ.ಭ. ದರಬಾರ ಶಾಲೆಯಲ್ಲಿ ಇನ್ನರ್‌ವೀಲ್ ಕ್ಲಬ್ ಹಾಗೂ ವಿ.ಭ. ದರಬಾರ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ಗಣೇಶ ಉತ್ಸವದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ದುಗಳನ್ನು ಸುಡುವುದರಿಂದ ಉಂಟಾಗುವ ವಾಯು ಮಾಲಿನ್ಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ವಿ.ಭ. ದರಬಾರ ಪ್ರೌಢ ಶಾಲೆ ಉಪ ಪ್ರಾಚಾರ್ಯ ವಿ.ಕೆ. ಗುಜರಿ ಮಾತನಾಡಿ, ಸಕಲ ಜೀವಿಗಳಿಗೆ ವಾಸಿಸಲು ಇರುವುದೊಂದೆ ಭೂಮಿ. ಅದರ ಘಟಕಗಳ ಮಾಲಿನ್ಯ ಜೀವ ಸಂಕುಲದ ವಿನಾಶ ಎಂಬುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.
ದರಬಾರ ಪ್ರೌಢ ಶಾಲೆ ಇಕೊ-ಕ್ಲಬ್ ಮುಖ್ಯಸ್ಥೆ ಜಯಶ್ರೀ ಪಾಟೀಲ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಜಾಗೃತಿ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳ ಜ್ಞಾನಸಿಂಚನ ಮಾಡಿದರು.
ಕೊನೆಯಲ್ಲಿ ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಸುಖಲತಾ ಪರಿಸರ ರಕ್ಷಣೆಯ ಪ್ರತಿಜ್ಞಾವಿಽ ಬೋಽಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net