ಪ್ರತಿಯೊಬ್ಬರೂ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲಿ

ವಿಜಯಪುರ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ಮುಕ್ತ ಯುವ ಸಮುದಾಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ವಿ.ಎನ್. ಕೆಂಗನಾಳ, ಜಯಂತಿ ನಾಯಕ, ಎಸ್.ಎಸ್. ಹೊನಮೊರೆ ಮತ್ತಿತರರಿದ್ದಾರೆ.
ವಿಜಯಪುರ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ಮುಕ್ತ ಯುವ ಸಮುದಾಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ವಿ.ಎನ್. ಕೆಂಗನಾಳ, ಜಯಂತಿ ನಾಯಕ, ಎಸ್.ಎಸ್. ಹೊನಮೊರೆ ಮತ್ತಿತರರಿದ್ದಾರೆ.
Published on
ವಿಜಯಪುರ: ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು. ಕಾಲೇಜ್ ಆವರಣದಲ್ಲಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ನಡುವೆ ಸ್ನೇಹ, ಸೌಹಾರ್ದತೆ ಮತ್ತು ಪರಸ್ಪರ ಗೌರವದಿಂದ ಇರಬೇಕು. ರ‍್ಯಾಗಿಂಗ್‌ನAತಹ ಅನಿಷ್ಟ ಪದ್ಧತಿಗೆ ಅವಕಾಶ ನೀಡದೆ ಪ್ರತಿಯೊಬ್ಬರೂ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಶ್ರಮಿಸಬೇಕು ಎಂದು ಪ್ರಾಚಾರ್ಯೆ ವಿ.ಎನ್. ಕೆಂಗನಾಳ ಹೇಳಿದರು.
ನಗರದ ಮಾರ್ಗದರ್ಶಿ ಸಮೂಹ ಸಂಸ್ಥೆಯ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆ್ಯಂಟಿ ರ‍್ಯಾಗಿಂಗ್ ಘಟಕದಡಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರ‍್ಯಾಗಿಂಗ್ ಮುಕ್ತ ಯುವ ಸಮುದಾಯ ವಿಶೇಷ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲï ಜಯಂತಿ ನಾಯಕ ಅವರು ಮಾತನಾಡಿ, ರ‍್ಯಾಗಿಂಗ್ ಎನ್ನುವುದು ಕೇವಲ ಶಿಸ್ತುಬಂಧದ ಉಲ್ಲಂಘನೆಯಲ್ಲ, ಅದೊಂದು ಗಂಭೀರ ಕಾನೂನು ಅಪರಾಧ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಅತಿಥಿ ನ್ಯಾಯವಾದಿ ಎಸ್.ಎಸ್. ಹೊನಮೊರೆ ಮಾತನಾಡಿ, ರ‍್ಯಾಗಿಂಗ್ ತಡೆಗೆ ಕಟ್ಟುನಿಟ್ಟಿನ ಕಾನೂನುಗಳಿದ್ದು, ಸಂತ್ರಸ್ತ ವಿದ್ಯಾರ್ಥಿಗಳಿಗೆ ಕಾನೂನಿನ ರಕ್ಷಣೆ ಸಂಪೂರ್ಣವಾಗಿ ಸಿಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಭಯಮುಕ್ತ ವಾತಾವರಣದಲ್ಲಿ ಶಿಕ್ಷಣ ಪಡೆಯುವುದು ಅವರ ಹಕ್ಕಾಗಿದೆ ಎಂದು ತಿಳಿಸಿದರು.
ಆ್ಯಂಟಿ ರ‍್ಯಾಗಿಂಗ್ ಘಟಕದ ಸಂಯೋಜಕಿ ಮಾಲಾಶ್ರೀ ಕನ್ನಾಳ ಮತ್ತು ಎನ್‌ಎಸ್‌ಎಸ್ ಘಟಕದ ಸಂಯೋಜಕ ಅನೀಲ ಅಬಲಾಪೂರ ಮಾತನಾಡಿದರು.
ಉಪನ್ಯಾಸಕರಾದ ಶರಣಬಸಪ್ಪ ಶಿವಶರಣ, ಮಾಳಪ್ಪ ಸಿದ್ನಾತ್, ಸಚಿನ ಅವಟಿ, ಸಂಕೇತ ರೊಳ್ಳಿ, ಸೌಮ್ಯಾ ಪಾಟೀಲ, ಗುರುದೇವಿ ಪತ್ತಾರ, ಭಾಗ್ಯ ಹಿರೇಮಠ, ಭಾಸ್ಕರ ಕುಲಕರ್ಣಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net