ಪ್ರತಿಯೊಬ್ಬರು ಬಡ ಜಂಗಮರಿಗೆ ಸಹಕಾರವಿರಲಿ

ವಿಜಯಪುರದ ಬೆಂಡಿಗೇರಿ ಗಲ್ಲಿಯಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭೆಯ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಜಗದೀಶ ಗುಡಗುಂಟಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಸಂಜೀವ ಹಿರೇಮಠ ಮತ್ತಿತರರಿದ್ದಾರೆ.
ವಿಜಯಪುರದ ಬೆಂಡಿಗೇರಿ ಗಲ್ಲಿಯಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭೆಯ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಜಗದೀಶ ಗುಡಗುಂಟಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಸಂಜೀವ ಹಿರೇಮಠ ಮತ್ತಿತರರಿದ್ದಾರೆ.
Published on
ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಬರುವ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡಬೇಕು ಎಂದು ಜಮಖಂಡಿ ಮತಕ್ಷೇತ್ರದ ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬೆಂಡಿಗೇರಿ ಗಲ್ಲಿಯಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭೆಯ ಜಿಲ್ಲಾ ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಽಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಬಡ ಕುಟುಂಬದಿAದಲೇ ಬೆಳೆದು ಬಂದವನು. ಪ್ರತಿ ವಾರಕ್ಕೊಮ್ಮೆ ಪ್ರತಿಯೊಬ್ಬರ ಮನೆಯಲ್ಲಿ ಊಟ ಮಾಡಿ ವಿದ್ಯಾಭ್ಯಾಸ ಮಾಡುತ್ತಿದೆ. ಬಡತನದ ಅರಿವು ನನಗಿದ್ದು, ಹೀಗಾಗಿ, ವಿದ್ಯಾರ್ಥಿಗಳು ಕಷ್ಟ, ಕಾರ್ಪಣ್ಯಗಳನ್ನು ಎದುರಿಸಿ ವಿದ್ಯಾಭ್ಯಾಸ ಮಾಡಲು ಅಣಿಯಾಗಬೇಕು. ಬಡ ಜಂಗಮರಿಗೆ ಸಹಾಯ ಸಹಕಾರ ಪ್ರತಿಯೊಬ್ಬರು ನೀಡಬೇಕು. ಜಂಗಮ ವೃತ್ತಿ ಶ್ರೇಷ್ಠವಾದದ್ದು ಅದಕ್ಕೆ ತಕ್ಕಂತೆ ನಮ್ಮ ನಡುವಳಿಕೆಗಳು ಇರಬೇಕೆಂದು ಸಲಹೆ ನೀಡಿದರು.
ಅಲ್ಲದೇ, ಜಿಲ್ಲಾ ಜಂಗಮ ಸಂಘವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡುವ ಪುರಸ್ಕಾರಕ್ಕೆ ವಯಕ್ತಿಕವಾಗಿ ಎರಡು ಲಕ್ಷ ರೂಪಾಯಿ ನೀಡಿದರು.
ಸಾನ್ನಿಧ್ಯ ವಹಿಸಿದ್ದ ನಾಗಠಾಣ ಉದಯೇಶ್ವರ ಮಠದ ಷಟಸ್ಥಳ ಬ್ರಹ್ಮ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ವಿಜಯಪುರ ಜಿಲ್ಲೆಯಲ್ಲಿಯೇ ಜಂಗಮರು ಹೆಚ್ಚಿದ್ದಾರೆ. ಆದರೆ ಈ ಜಿಲ್ಲೆಯ ಜಂಗಮರಲ್ಲಿ ಒಗ್ಗಟ್ಟಿಲ್ಲ. ಇದು ಪ್ರತಿಯೊಬ್ಬ ಜಂಗಮನಲ್ಲಿ ಸ್ವ ಪ್ರತಿಷ್ಠೆ ಮನೆ ಮಾಡಿದೆ. ಅದನ್ನು ಬಿಟ್ಟು ಜಂಗಮ ನಾಯಕರೆಲ್ಲ ಒಂದಾಗಿ ಬಡ ಜಂಗಮರ ಸಲುವಾಗಿ ದುಡಿಯಬೇಕು ಎಂದು ಕರೆ ನೀಡಿದರು.
ತಡವಲಗಾದ ರಾಚೋಟೇಶ್ವರ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಸಾವಳಗಿಮಠ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ 55 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಗದು ಹಣ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಸಂಜೀವ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎ. ಹಿರೇಮಠ, ಎಸ್.ಎಲ್. ನಿಂಬರಗಿಮಠ, ಎನ್.ಆರ್. ಮಠ, ಎಸ್.ಎಸ್. ಹಿರೇಮಠ, ಬಸಯ್ಯ ಚಿನ್ಕಾಳಿಮಠ, ಪ್ರಸಾದ ವಸöದ, ಬಸವರಾಜ ನಂದಿಕೋಲಮಠ, ಗುರಯ್ಯ ಯಾದವಾಡಮಠ, ರಾಚಯ್ಯ ಚೌಕಿಮಠ, ರಾಚಯ್ಯ ಮಠಪತಿ, ಗುರು ಸಿದ್ದಯ್ಯ ಹಿರೇಮಠ, ನಂಜುAಡಿ ಮಠಪತಿ, ಬಿ.ಐ. ಹಿರೇಮಠ, ಮಲ್ಲಯ್ಯ ಹಿರೇಮಠ, ಆರ್.ಜಿ. ಮಠಪತಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net