ರಾಣಾಪ್ರತಾಪರ ಇತಿಹಾಸ ಮಕ್ಕಳಿಗೆ ತಿಳಿಯಲಿ

ತಾಳಿಕೋಟೆ ಪಟ್ಟಣದ ಅಂಬಾಭವಾನಿ ಮಂದಿರದಲ್ಲಿ ರಜಪೂತ ಸಮಾಜ ಮತ್ತು ಚೇತಕ್ ಸಂಘದ ವತಿಯಿಂದ ಮಹಾ ರಾಣಾ ಪ್ರತಾಪಸಿಂಹ್ ಅವರ ಜಯಂತ್ಯುತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ವೇ. ಭೀಮಾಶಂಕರ ಜೋಶಿ ಪೂಜೆ ಸಲ್ಲಿಸಿದರು. ಭೀಮಾಶಂಕರ ಜೋಶಿ, ಹರಿಸಿಂಗ್ ಮೂಲಿಮನಿ, ಗೋವಿಂದ ಸಿಂಗ್ ಮೂಲಿಮನಿ ಮತ್ತಿತರರಿದ್ದರು.

Published on
ತಾಳಿಕೋಟೆ: ಮಹಾರಾಣಾ ಪ್ರತಾಪಸಿಂಹ ತಮ್ಮ ಇಡೀ ಜೀವನವನ್ನು ಧರ್ಮ ರಕ್ಷಣಾರ್ಥವಾಗಿ ಹೋರಾಡಿದ ಧಿಮಂತ ರಜಪೂತ ದೊರೆ ಎಂದು ಪುರಸಭೆ ಮಾಜಿ ಸದಸ್ಯ ಜೈಸಿಂಗ್ ಮೂಲಿಮನಿ ಹೇಳಿದರು.
ಪಟ್ಟಣದ ಅಂಬಾಭವಾನಿ ಮಂದಿರದಲ್ಲಿ ರಜಪೂತ ಸಮಾಜ ಮತ್ತು ಚೇತಕ್ ಸಂಘದ ವತಿಯಿಂದ ಶನಿವಾರ ಮಹಾರಾಣಾ ಪ್ರತಾಪಸಿಂಹ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇವಾರದ ದೊರೆ ಮಹಾ ರಾಣಾ ಪ್ರತಾಪಸಿಂಹ ಸೂರ್ಯವಂಶಿ ರಜಪೂತರ ಸಿಸೋದಿಯ ವಂಶಕ್ಕೆ ಸೇರಿದವರು. ಅವರು ಮಹಾವೀರ, ಪರಾಕ್ರಮಿ, ದೇಶಪ್ರೇಮಿಯಾಗಿದ್ದರು. ಅವರ ಆದರ್ಶಗಳನ್ನು ಮಕ್ಕಳಿಗೆ ಮೈಗೂಡಿಸಿಕೊಂಡು ಸಾಗಬೇಕಿದೆ ಎಂದರು.
ಅರ್ಚಕ ವೇ. ಭೀಮಾಶಂಕರ ಜೋಶಿ, ಹರಿಸಿಂಗ್ ಮೂಲಿಮನಿ, ಗೋವಿಂದ ಸಿಂಗ್ ಮೂಲಿಮನಿ, ಭರತಸಿಂಗ್ ವಿಜಾಪೂರ, ರಮೇಶ ಗೌಡಗೇರಿ, ಮಾನಸಿಂಗ್ ಕೊಕಟನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net