ನಾಗರಬೆಟ್ಟ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ

ನಾಲತವಾಡ ಸಮೀಪದ ಸೋಮನಾಳ ನಾಗರಬೆಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಕ್ಷೇತ್ರ ಸಮನ್ವಯ ಅಽಕಾರಿ ದಮ್ಮೂರಮಠ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಗುರಿಕಾರ, ಬಿ. ಎಚ್. ಮುದ್ನೂರ್, ಅಶೋಕ್ ಮಂತನ ಇತರರಿದ್ದರು.
ನಾಲತವಾಡ ಸಮೀಪದ ಸೋಮನಾಳ ನಾಗರಬೆಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಕ್ಷೇತ್ರ ಸಮನ್ವಯ ಅಽಕಾರಿ ದಮ್ಮೂರಮಠ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಗುರಿಕಾರ, ಬಿ. ಎಚ್. ಮುದ್ನೂರ್, ಅಶೋಕ್ ಮಂತನ ಇತರರಿದ್ದರು.
Published on
ಸಮೀಪದ ಸೋಮನಾಳದ ನಾಗರಬೆಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್‌ಮಟ್ಟದ ೨೦೨೫-೨೬ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ದಮ್ಮೂರಮಠ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಗುರಿಕಾರ ಚಾಲನೆ ನೀಡಿದರು.
ಅಡವಿ ಸೋಮನಾಳದ ಸಿಆರ್‌ಪಿ ಎಸ್.ಎಸ್. ಭಾವಿಕಟ್ಟಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್‌ಮಟ್ಟದಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ `ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ' (ಎಫ್‌ಎಲ್‌ಎನ್) ಚಟುವಟಿಕೆಗಳ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣ ಪ್ರೇರೇಪಿಸುತ್ತದೆ. ಇಂಥ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ (ಎಫ್‌ಎಲ್‌ಎನ್) ನಲ್ಲಿ ಮಕ್ಕಳು ಸಾಧಿಸಿರುವ ಕಲಿಕಾ ಫಲಗಳನ್ನು ತಿಳಿಯಲು ಮತ್ತು ಅವರ ಪ್ರತಿಭೆ ಹೊರಹೊಮ್ಮಲು ಉತ್ತಮ ವೇದಿಕೆ ಆಗಿದೆ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುದ್ದೇಬಿಹಾಳ ಘಟಕದ ಅಧ್ಯಕ್ಷ ಬಿ. ಎಚ್. ಮುದ್ನೂರ್ ಮಾತನಾಡಿದರು.
ಇದೇ ವೇಳೆ ಶಾಲೆ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿದರು. ಶಾಲೆ ಮುಖ್ಯಶಿಕ್ಷಕರು, ಶಿಕ್ಷಕರು ಮಕ್ಕಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಚಲವಾದಿ, ಎ.ಬಿ. ಬಗಲಿ, ಸುರೇಶ ಹಿರೇಮಠ, ಡಿ.ಬಿ. ಗುರಿಕಾರ, ಎಂ.ಎಸ್. ಗುಡಗುಂಟಿ, ಪಿ.ಎ. ಭೋವೆರ, ಮಹಾಂತೇಶ ನೂಲಿನವರ, ಸರಸ್ವತಿ ವಡವಡಗಿ, ಎ.ಸಿ. ಕಸರೇಗೌಡ, ಎನ್.ಎಸ್. ತುರುಡಗಿ, ಭರತೇಶ ಹೊಳಿ, ಎ.ಎಚ್. ಕಾಜಿ, ಅಡವಿ ಸೋಮನಾಳ ಇತರರಿದ್ದರು.
ಅಶೋಕ್ ಮಂತನ ಸ್ವಾಗತಿಸಿದರು. ಬಿ.ಎಸ್. ಕಂಠಿ ನಿರೂಪಿಸಿದರು. ಸಂಗನಬಸಪ್ಪ ಹಾದಿಮನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net