ಹಿಂದೂ ಯುವತಿಯರಿಗೆ ಭದ್ರತೆ ನೀಡಿ, ಹಿಂದೂಪರ ಸಂಘಟನೆಗಳ ಮುಖಂಡರ ಒತ್ತಾಯ

ವಿಜಯಪುರ ಜಿಲ್ಲಾಡಳಿತಕ್ಕೆ ಹಿಂದೂಪರ ಸಂಘಟನೆಗಳ ಪ್ರಮುಖರು ಮನವಿ ಸಲ್ಲಿಸಿದರು. ದಯಾಸಾಗರ ಪಾಟೀಲ, ಕೃಷ್ಣಾ ಗುನ್ಹಾಳಕರ, ಪ್ರೇಮಾನಂದ ಬಿರಾದಾರ, ಮಹೇಂದ್ರಕುಮಾರ ನಾಯಕ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಹಿಂದೂಪರ ಸಂಘಟನೆಗಳ ಪ್ರಮುಖರು ಮನವಿ ಸಲ್ಲಿಸಿದರು. ದಯಾಸಾಗರ ಪಾಟೀಲ, ಕೃಷ್ಣಾ ಗುನ್ಹಾಳಕರ, ಪ್ರೇಮಾನಂದ ಬಿರಾದಾರ, ಮಹೇಂದ್ರಕುಮಾರ ನಾಯಕ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಟಿಎಸಿಎಸ್ ಕಂಪನಿಯಲ್ಲಿ ಕಿರುಕುಳ
  • ಕೆಲಸದ ಸ್ಥಳದಲ್ಲಿ ಅನುಚಿತ ವರ್ತನೆ
  • ಕಠಿಣ ಕಾನೂನು ಕ್ರಮ ರೂಪಿಸಲು ಆಗ್ರಹ
ವಿಜಯಪುರ: ಕೆಲಸದ ಸ್ಥಳದಲ್ಲಿ ಹಿಂದೂ ಯುವತಿಯರಿಗೆ ಕಿರುಕುಳ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದ ನಾಸಿಕ್ ನಗರದ ಬಹುರಾಷ್ಟ್ರೀಯ ಕಂಪನಿ ಟಿಸಿಎಸ್ ಇಂಥ ಘಟನೆಗೆ ಸಾಕ್ಷಿಯಾಗಿದೆ. ಹೀಗಾಗಿ ಹಿಂದೂ ಯುವತಿಯರಿಗೆ ಕೆಲಸದ ಸ್ಥಳದಲ್ಲಿ ಭದ್ರತೆ ಕಲ್ಪಿಸಲು ಆಗ್ರಹಿಸಿ ಹಿಂದೂಪರ ಸಂಘಟನೆಗಳ ಪ್ರಮುಖರು ಶುಕ್ರವಾರ ದಯಾಸಾಗರ ಪಾಟೀಲ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗುತ್ತಿದೆ. ಹಿಂದೂಗಳ ಆಚರಣೆಗಳಿಗೆ ಅವಮಾನಿಸುವ ಕೃತ್ಯ ಕಂಡು ಬರುತ್ತಿದೆ. ದೇಶದ ವಿವಿಧ ಭಾಗಗಳಲ್ಲಿರುವ ಇಂಥ ಕಂಪನಿಗಳ ಮೇಲೆ ನಿಗಾ ಇರಿಸಬೇಕು. ಅದಕ್ಕಾಗಿ ಕಠಿಣ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.
ದಯಾಸಾಗರ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೂ ವಿವಿಧ ಸಮುದಾಯಗಳು ಮತ್ತು ಹಿನ್ನೆಲೆಯಿಂದ ಬಂದ ಉದ್ಯೋಗಿಗಳನ್ನು ಹೊಂದಿರುವ ಅನೇಕ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವಾ ಕೇಂದ್ರಗಳು, ತರಬೇತಿ ಸಂಸ್ಥೆಗಳು ಹಾಗೂ ಸಣ್ಣ ಕೈಗಾರಿಕೆಗಳಿವೆ. ಎಲ್ಲ ಉದ್ಯೋಗಿಗಳಿಗೆ ಸುರಕ್ಷಿತ, ಗೌರವಯುತ ಮತ್ತು ಕಾನೂನುಬದ್ಧ ಕೆಲಸದ ವಾತಾವರಣವನ್ನು ಖಚಿತಪಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಈ ಹಿನ್ನೆಲೆಗಳಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಕೆಲಸದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಉದ್ಯೋಗಿಗಳ ಹಕ್ಕುಗಳು ಹಾಗೂ ದೂರು ಪರಿಹಾರ ವ್ಯವಸ್ಥೆಗಳ ಕುರಿತು ಜಾಗೃತಿ ಮೂಡಿಸಬೇಕು, ಕಿರುಕುಳ ಮತ್ತು ಯಾವುದೇ ಬಲವಂತದ ವಿರುದ್ಧ ಕಠಿಣ ನೀತಿಗಳನ್ನು ಸಂಸ್ಥೆಗಳು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು, ಇಂತಹ ದೂರುಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆಯಿಂದ ಹಾಗೂ ತ್ವರಿತವಾಗಿ ಪ್ರತಿಕ್ರಿಯಿಸುವಂತೆ ಸೂಚಿಸಬೇಕು, ತ್ವರಿತವಾಗಿ ಸ್ಪಂದಿಸಲು ಸಹಾಯವಾಣಿ ಸಂಖ್ಯೆ ಪ್ರಕಟಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಕೃಷ್ಣಾ ಗುನ್ಹಾಳಕರ, ಪ್ರೇಮಾನಂದ ಬಿರಾದಾರ, ಮಹೇಂದ್ರಕುಮಾರ ನಾಯಕ, ಕುಮಾರ ಗಡಗಿ, ಸುನೀಲ ಭೈರವಾಡಗಿ, ಶಂಕರ ಹೂಗಾರ, ಸಿದ್ದು ಕಲ್ಲೂರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net