ವಿಜಯಪುರ ನಗರ ಹೊರ ವಲಯದ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಣಪತಿ ಜಾಧವ, ಪ್ರಕಾಶ ಚವಾಣ ಮತ್ತಿತರರಿದ್ದಾರೆ.
ವಿಜಯಪುರ : ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುರುವಾರ ಭೂಮಿ ಪೂಜೆ ನೆರವೇರಿಸಿ, ನಂತರ ಸಾರ್ವಜನಿಕರ ಅಹವಾಲು ಆಲಿಸಿದರು.
ಇಲ್ಲಿನ ಬಂಜಾರಾ ಕ್ರಾಸ್ ಶ್ರೀ ಸೇವಾಲಾಲ ವೃತ್ತದ ಬಳಿ ನಗರಾಭಿವೃದ್ಧಿ ಪ್ರಾಽಕಾರದಿಂದ ಮಂಜೂರಿಸಿದ ೬ ಲಕ್ಷ ರೂ. ಅನುದಾನದಲ್ಲಿ ೧೬ ಮೀ. ಎತ್ತರದ ಹೈಮಾ¸್ಟï ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಂತರ ವಾಡ್ ನಂ. ೪ರಲ್ಲಿ ಬರುವ ಭೂತನಾಳ ತಾಂಡಾದಲ್ಲಿ ೨೦೨೫-೨೬ನೇ ಸಾಲಿನ ಕಾಲನಿ ಅಭಿವೃದ್ಧಿ/ಪ್ರಗತಿ ಕಾಲನಿ ಯೋಜನೆಯಡಿ ಮಂಜೂರಿಸಿದ ೨ ಕೋಟಿ ರೂ. ಅನುದಾನದಲ್ಲಿ ಭೂತನಾಳ ತಾಂಡಾದ ಉತ್ತರ ಮತ್ತು ದಕ್ಷಿಣ ಭಾಗದ ಆಂತರಿಕ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು.
ಬಳಿಕ ಅಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ದುರ್ಗಾದೇವಿ ದರ್ಶನಾಶೀರ್ವಾದ ಪಡೆದುಕೊಂಡು ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಿದರು.