ಕೆಬಿಜೆಎನ್‌ಎಲ್ ಎಂಡಿ ಕಚೇರಿ ಜಪ್ತಿ

ಆಲಮಟ್ಟಿಯಲ್ಲಿರುವ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನು ನ್ಯಾಯಾಲಯಗಳ ಆದೇಶಗಳಂತೆ ಬುಧವಾರ ಜಪ್ತಿ ಮಾಡಲಾಯಿತು. ರೈತಪರ ನ್ಯಾಯವಾದಿಗಳಾದ ಆರ್.ಎಸ್. ಬಿರಾದಾರ, ಜಿ.ಎಸ್. ಬಿಜ್ಜೂರ, ಎಂ.ಎಸ್. ಹಿರೇಮಠ, ನ್ಯಾಯಾಲಯದ ಪ್ರತಿನಿಧಿಗಳು ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರ ಬಿ.ಎಸ್. ಪಾಟೀಲ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗ ಇತರರಿದ್ದರು.
ಆಲಮಟ್ಟಿಯಲ್ಲಿರುವ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನು ನ್ಯಾಯಾಲಯಗಳ ಆದೇಶಗಳಂತೆ ಬುಧವಾರ ಜಪ್ತಿ ಮಾಡಲಾಯಿತು. ರೈತಪರ ನ್ಯಾಯವಾದಿಗಳಾದ ಆರ್.ಎಸ್. ಬಿರಾದಾರ, ಜಿ.ಎಸ್. ಬಿಜ್ಜೂರ, ಎಂ.ಎಸ್. ಹಿರೇಮಠ, ನ್ಯಾಯಾಲಯದ ಪ್ರತಿನಿಧಿಗಳು ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರ ಬಿ.ಎಸ್. ಪಾಟೀಲ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರ ಜಮೀನಿಗೆ ಯೋಗ್ಯ ಪರಿಹಾರ ನೀಡದ ಇಲಾಖೆ
  • ನ್ಯಾಯಾಲಯದಿಂದ ಆದೇಶ
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಪಡಿಸಿಕೊಂಡ ರೈತರ ಜಮೀನಿಗೆ ಯೋಗ್ಯ ಪರಿಹಾರ ನೀಡದಿರುವುದರಿಂದ ನ್ಯಾಯಾಲಯಗಳ ಆದೇಶಗಳಂತೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಬುಧವಾರ ಜಪ್ತಿ ಮಾಡಲಾಗಿದೆ.
ಈ ಕುರಿತು ಮಾತನಾಡಿದ ನ್ಯಾಯವಾದಿ ಆರ್.ಜಿ. ಪಾಟೀಲ, ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಏತ ನೀರಾವರಿ ಯೋಜನೆಯ ವಿವಿಧ ಕಾಲುವೆಗಳ ನಿರ್ಮಾಣಕ್ಕೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದ ಮಹದೇವಪ್ಪ ಮ. ಲಿಗಾಡೆಯವರಿಗೆ 62,59,734 ರೂ. ಗಳು ಮತ್ತು ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಅಕ್ರಮ ಸಾ.ಹು. ಮುಲ್ಲಾ ಅವರಿಗೆ 4,28,68,022 ರೂ. ಗಳು ಸೇರಿ ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಸರ್ಕಾರ ಯೋಗ್ಯ ಪರಿಹಾರ ನೀಡದಿರುವುದರಿಂದ ರೈತರು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ವಿಶೇಷ ಭೂಸ್ವಾಧೀನ, ಪುನರ್ವಸತಿ- ಪುನರ್ನಿರ್ಮಾಣ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರೈತರಿಗೆ ಯೋಗ್ಯ ಪರಿಹಾರ ನೀಡುವಂತೆ ವಿಜಯಪುರ ಜಿಲ್ಲಾ ಒಂದನೇ ಹೆಚ್ಚುವರಿ ನಾಯಾಧೀಶ ಹಾಗೂ ವಿಜಯಪುರ ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಧೀಶ ರೈತರಿಗೆ ಪರಿಹಾರ ನೀಡಲು ಗಡುವು ನೀಡಿದ್ದಾರೆ.
ನ್ಯಾಯಾಲಯವು ನೀಡಿದ ಗಡುವುಗಳನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಉಲ್ಲಂಘಿಸಿ ಪರಿಹಾರ ನೀಡದಿರುವುದರಿಂದ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಜಪ್ತಿಗೆ ಆದೇಶ ನೀಡಿತು.
ಇದರಿಂದ ಬುಧವಾರ ನ್ಯಾಯಾಲಯಗಳಿಂದ ನಿಯುಕ್ತರಾದವರ ಸಮ್ಮುಖದಲ್ಲಿ ಜಪ್ತಿ ನಡೆಸಲಾಯಿತು ಎಂದರು.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಿಂದ ಇನ್ನೋವಾ ಕಾರು (1), ಜೀಪ್ (1), ಕುರ್ಚಿಗಳು (20), ಟೇಬಲ್‌ಗಳು (22), ಸೀಲಿಂಗ್ ಫ್ಯಾನ್(4), ಫ್ಯಾಕ್ಸ್ ಮಶಿನ್ (1), ಝರಾಕ್ಸ್ ಮಶಿನ್ (1), ಟ್ರೆಜರಿ (16), ಕಂಪ್ಯೂಟರ್ (10), ಲೈಟ್‌ಗಳು (30), ಪ್ರಿಂಟರ್(5) ಜಪ್ತಿ ಮಾಡಲಾಗಿದೆ ಎಂದರು.
ಇಂತಹ ಹಲವಾರು ಪ್ರಕರಣಗಳಿದ್ದು, ಸರ್ಕಾರ ಶೀಘ್ರವಾಗಿ ಎಲ್ಲಾ ಸಂತ್ರಸ್ತ ರೈತರಿಗೆ ನ್ಯಾಯಾಲಯವು ನೀಡಿರುವ ಆದೇಶದಂತೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯವಾದಿ ಆರ್.ಜಿ. ಪಾಟೀಲ ಹೇಳಿದರು.
ಜಪ್ತಿಯ ವೇಳೆ ರೈತಪರ ನ್ಯಾಯವಾದಿಗಳಾದ ಆರ್.ಎಸ್. ಬಿರಾದಾರ, ಜಿ.ಎಸ್. ಬಿಜ್ಜೂರ, ಎಂ.ಎಸ್. ಹಿರೇಮಠ, ನ್ಯಾಯಾಲಯದ ಪ್ರತಿನಿಧಿಗಳು ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರ ಬಿ.ಎಸ್. ಪಾಟೀಲ ಹಾಗೂ ಅಧಿಕಾರಿಗಳು, ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net