ವಿಜಯಪುರ : ಬಸವನಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದ `ವಿಜಯವಾಣಿ' ದಿನಪತ್ರಿಕೆ ವರದಿಗಾರ ಡಿ.ಬಿ. ಕುಪ್ಪಸ್ತ ಅವರ ಪುತ್ರ ಸುಮಂತ ಕುಪ್ಪಸ್ತ ಪಿಯು ವಿಜ್ಞಾನ ಪರೀಕ್ಷೆಯಲ್ಲಿ ಶೇ. 97.67ರಷ್ಟು ಅಂಕ ಗಳಿಸಿದ್ದು, ತಾನು ಕಲಿತ ಮುದ್ದೇಬಿಹಾಳ ಸಮೀಪದ ನಾಗರಬೆಟ್ಟದ ಆಕ್ಸ್ಫರ್ಡ್ ಮಠ್ಸ್ ಸಮೂಹ ಸಂಸ್ಥೆಯ ಎಕ್ಸ್ಫರ್ಟ್ ಪಿಯು ಸೈನ್ಸ್ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾನೆ. ಭೌತಶಾಸ್ತç ಮತ್ತು ಗಣಿತ ವಿಷಯದಲ್ಲಿ 100 ಅಂಕ ಗಳಿಸಿದರೆ, ಕನ್ನಡ ಮತ್ತು ರಸಾಯನಶಾಸ್ತçದಲ್ಲಿ 98 ಅಂಕ, ಜೀವಶಾಸö 96 ಮತ್ತು ಇಂಗ್ಲಿಷಿನಲ್ಲಿ 94 ಸೇರಿ ಒಟ್ಟು ಶೇ. 97.67ರಷ್ಟು ಅಂಕ ಗಳಿಸಿದ್ದಾನೆ.