ವಿಜಯಪುರದ ಪ್ರಗತಿ ಪ್ರಾಥಮಿಕ ಮತ್ತು ಪೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಜಂಬುನಾಥ ಕಂಚ್ಯಾಣಿ ಮಾತನಾಡಿದರು. ಸಿದ್ಧಲಿಂಗ ಮನಹಳ್ಳಿ, ವಿ.ಡಿ. ಐಹೊಳ್ಳಿ ಮತ್ತಿತರರಿದ್ದಾರೆ.
ವಿಜಯಪುರ: ಶೈಶಾವಸ್ಥೆ, ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯಲ್ಲಿ ಎಲ್ಲ ಮಕ್ಕಳು ಒಂದೇ ಇರುವದಿಲ್ಲ. ಅವರ ಬೌದ್ಧಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.
ನಗರದ ಪ್ರಗತಿ ಪ್ರಾಥಮಿಕ ಮತ್ತು ಪೌಢಶಾಲೆಯಲ್ಲಿ ಪ್ರಾ. ಎ.ಎಸ್. ಹಿಪ್ಪರಗಿ ಪ್ರತಿಷ್ಠಾನ ಮತ್ತು ಪ್ರಗತಿ ಶಾಲೆ ಸಂಯುಕ್ತಾಶ್ರಯದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ಇತ್ತೀಚೆಗೆ ಹಮ್ಮಿಕೊಂಡಿದ್ದ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಬಾಲ್ಯದಲ್ಲಿಯೇ ಸರಿಯಾದ ಮಾರ್ಗದರ್ಶನ ನೀಡುವುದರಿಂದ ಭವಿಷ್ಯದ ಜೀವನದಲ್ಲಿ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯಲು ಸಾಧ್ಯ. ಮಕ್ಕಳಲ್ಲಿ ಸತ್ಯ-ಅಸತ್ಯ, ನೋವು-ನಲಿವು, ಅಜ್ಞಾನ-ಸುಜ್ಞಾನಗಳ ತಾರತಮ್ಯವನ್ನು ಹೋಗಲಾಡಿಸಿ, ಮೂಢ ನಂಬಿಕೆಗಳಿAದ ದೂರವಿರಿಸುವ ಜತೆಗೆ ಅವುಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ತಿಳಿಸಬೇಕೆಂದು ಅವರು ಸಲಹೆ ನೀಡಿದರು.
ಆಡಳಿತಾಽಕಾರಿ ಸಿದ್ಧಲಿಂಗ ಮನಹಳ್ಳಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ವಿ.ಡಿ. ಐಹೊಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ಎನ್. ಶಿವಣಗಿ ಸ್ವಾಗತಿಸಿದರು. ಬಿ.ಕೆ. ಗೋಟ್ಯಾಳ ನಿರೂಪಿಸಿದರು. ಅಶೋಕ ಹಿಪ್ಪರಗಿ ವಂದಿಸಿದರು.
ವಿದ್ಯಾವತಿ ಅಂಕಲಗಿ, ಎಸ್.ಜಿ. ನಾಡಗೌಡರ, ವಿ.ಸಿ. ನಾಗಠಾಣ, ಮುಖ್ಯ ಗುರು ಬಿ.ಎಸ್. ಬಿರಾದಾರ, ಎಸ್.ಬಿ. ದೊಡಮನಿ, ಜಿ.ಬಿ. ಸಾಲಕ್ಕಿ ಮತ್ತಿತರರಿದ್ದರು.