ನೀರಾವರಿಯಿಂದ ತೋಟಗಾರಿಕೆ ಬೆಳೆಗೆ ಅನುಕೂಲ

ತಿಕೋಟಾ ತಾಲೂಕಿನ ಬಾಬಾನಗರದ ಪ್ರಗತಿಪರ ರೈತ ಸಿದ್ರಾಮೇಶ್ವರಗೌಡ ಬಿರಾದಾರ ಅವರು ತಮ್ಮ ತೋಟದಲ್ಲಿ ಬೆಳೆದ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣನ್ನು ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲರಿಗೆ ಉಡುಗೊರೆಯಾಗಿ ನೀಡಿದರು. ಸಿದಗೊಂಡ ರುದ್ರಗೌಡರ, ಗುರುಪಾದಗೌಡ ದಾಶ್ಯಾಳ ಮತ್ತಿತರರಿದ್ದಾರೆ.
ತಿಕೋಟಾ ತಾಲೂಕಿನ ಬಾಬಾನಗರದ ಪ್ರಗತಿಪರ ರೈತ ಸಿದ್ರಾಮೇಶ್ವರಗೌಡ ಬಿರಾದಾರ ಅವರು ತಮ್ಮ ತೋಟದಲ್ಲಿ ಬೆಳೆದ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣನ್ನು ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲರಿಗೆ ಉಡುಗೊರೆಯಾಗಿ ನೀಡಿದರು. ಸಿದಗೊಂಡ ರುದ್ರಗೌಡರ, ಗುರುಪಾದಗೌಡ ದಾಶ್ಯಾಳ ಮತ್ತಿತರರಿದ್ದಾರೆ.
Published on
ವಿಜಯಪುರ: ತಿಕೋಟಾ ತಾಲೂಕಿನ ಬಾಬಾನಗರದ ಪ್ರಗತಿಪರ ರೈತ ಸಿದ್ರಾಮೇಶ್ವರಗೌಡ ಬಿರಾದಾರ ತಮ್ಮ ತೋಟದಲ್ಲಿ ಬೆಳೆದ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಿಗೆ ಉಡುಗೊರೆಯಾಗಿ ನೀಡಿ, ಕೃತಜ್ಞತೆ ಸಲ್ಲಿಸಿದರು.
ನಗರದ ಸಚಿವರ ಗೃಹ ಕಚೇರಿಗೆ ಸೋಮವಾರ ಆಗಮಿಸಿದ ರೈತ ಸಿದ್ರಾಮೇಶ್ವರ ಅವರು, ತಮ್ಮ ಒಂದು ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮೂಲಕ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣು ಬೆಳೆಯುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ತಾವು ಬೆಳೆದ ಪೇರಲ ಹಣ್ಣಿನ ಉಡುಗೊರೆ ನೀಡಿದರು.
ಗುಜರಾತಿನಿಂದ ಈ ವಿಶೇಷ ತಳಿಯ ಬೀಜ ತರಿಸಿ ಹಣ್ಣು ಬೆಳೆಯಲಾಗಿದೆ. ಸಚಿವರು ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಗುಣಮಟ್ಟದ ತೋಟಗಾರಿಕೆ ಬೆಳೆ ಬೆಳೆಯಲು ಸಹಾಯವಾಗಿದೆ. ಹೆಚ್ಚಿನ ನೀರು ಅಗ್ಯವಾಗಿರುವ ಈ ತಳಿ ಪೇರಲ ಬೆಳೆಯಲು ನೀರಾವರಿ ಯೋಜನೆಗಳು ಪ್ರಮುಖ ಕಾರಣವಾಗಿವೆ. ವರ್ಷಕ್ಕೆ ಎರಡು ಬಾರಿ ಈ ಹಣ್ಣನ್ನು ಬೆಳೆಯಬಹುದಾಗಿದ್ದು, ವಾರ್ಷಿಕವಾಗಿ 7 ರಿಂದ 8 ಲಕ್ಷ ರೂ. ಆದಾಯ ಗಳಿಸಬಹುದು ಎಂದು ರೈತ ಸಿದ್ರಾಮೇಶ್ವರ ತಿಳಿಸಿದರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ರೈತರ ಸಾರ್ಥಕ ಯಶೋಗಾಥೆ ಕೇಳಿ ಸಂತಸವಾಗಿದೆ. ತೋಟಗಾರಿಕೆ ಮತ್ತಷ್ಟು ಯಶಸ್ವಿಯಾಗಲಿ. ಇಂತಹ ನೂತನ ಪ್ರಯತ್ನಗಳು ನಮ್ಮ ಜಿಲ್ಲೆಯ ಕೃಷಿ, ತೋಟಗಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿವೆ ಎಂದರು.
ವಿಜಯಪುರ- ಬಾಗಲಕೋಟೆ ಕೆಎಂಎಫ್ ನಿರ್ದೇಶಕ ಸಿದಗೊಂಡ ರುದ್ರಗೌಡರ, ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗುರುಪಾದಗೌಡ ದಾಶ್ಯಾಳ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net