ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮ

ವಿಜಯಪುರದ ಬಿ.ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು. ವಸುಧಾ ನಾರ್ವೇಕರ, ಪೂಜಾ ಮತ್ತಿತರರಿದ್ದಾರೆ.
ವಿಜಯಪುರದ ಬಿ.ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು. ವಸುಧಾ ನಾರ್ವೇಕರ, ಪೂಜಾ ಮತ್ತಿತರರಿದ್ದಾರೆ.
Published on
ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಶನಿವಾರ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರ ತರಲು ವಿವಿಧ ಹವ್ಯಾಸಗಳ ತರಬೇತಿ ತರಗತಿಗಳನ್ನು ಪ್ರಾರಂಭಿಸಲಾಯಿತು.
ಅಲ್ಲದೆ, ವಿದ್ಯಾರ್ಥಿಗಳು ತಮಗಿಷ್ಟವಾದ ಹವ್ಯಾಸ ಆಯ್ಕೆ ಮಾಡಿಕೊಂಡರು. ಅವರಿಗೆ ನಗರದ ನುರಿತ ತರಬೇತುದಾರರನ್ನು ನೇಮಿಸಿ, ಚೆಸ್, -ÀÅಟ್ಬಾಲ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಸ್ಕೆಟಿಂಗ್, ನೃತ್ಯ, ಸಂಗೀತ, ಝುಂಬಾ, ಗಾರ್ಡನಿಂಗ್, ಅಗ್ನಿರಹಿತ ಆಹಾರ ತಯಾರಿಕೆ ಸೇರಿ ಮುಂತಾದ ಚಟುವಟಿಕೆಗಳಿಗೆ ತರಬೇತಿಯನ್ನು ವಿದ್ಯಾರ್ಥಿಗಳ ಆಸಕ್ತಿಗನುಣವಾಗಿ ಪ್ರಾರಂಭಿಸಲಾಯಿತು.
ಉಪ ಪ್ರಾಚಾರ್ಯೆ ವಸುಧಾ ನಾರ್ವೇಕರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು. ಸೋಲೇ ಗೆಲುವಿನ ಸೋಪಾನ ಮತ್ತು ಗೆಲುವೆಂಬುದು ಸತತ ಪರಿಶ್ರಮದ -Àಲ ಎಂಬುದನ್ನು ಮಕ್ಕಳಿಗೆ ಕಥೆಯ ಮೂಲಕ ಹೇಳಿದರು.
ಸದನಗಳ ಮುಖ್ಯ ಶಿಕ್ಷಕರು ಮತ್ತು ಮುಖ್ಯ ಬಾಲಕ-ಬಾಲಕಿಯರಿಗೆ ಅವರ ಸದನಧ್ವಜ ಮತ್ತು ಸಮವಸö ಹಸ್ತಾಂತರಿಸಲಾಯಿತು.
ನೃತ್ಯ ಶಿಕ್ಷಕಿ ಪೂಜಾ ಮತ್ತು ತರಬೇತಿದಾರ ಸಮೀರಖಾನ್ ನೃತ್ಯ ಮಾಡಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಸಂಗೀತ ಶಿಕ್ಷಕಿ ಸಂತೋಷಿ ಕುಸೂರ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯಸಂಯೋಜಕಿ -Àರಾ ಜಹಾಗೀದಾರ ನಿರೂಪಿಸಿದರು. ಕಿರಿಯರ ವಿಭಾಗದ ಸಾಂಸ್ಕೃತಿಕ ಕಾರ್ಯಸಂಯೋಜಕಿ ಶಿವಾನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net