ಶಾಸಿöÃ ನಗರ ಸ್ಲಂನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಶಾಸ್ತ್ರೀ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ವತಿಯಿಂದ ವಿಜಯಪುರದಲ್ಲಿ ಅಪರ ಜಿಲ್ಲಾಽಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು. ಮೈರುನ ಕೊಡೆಕಲ್, ಸುಶಿಲಾ ದೇಸಾಯಿ, ಹಸೀನಾ ಪಟವೇಗರ ಮತ್ತಿತರರಿದ್ದಾರೆ.
ವಿಜಯಪುರ : ಶಾಸ್ತ್ರೀ ನಗರ ಸ್ಲಂನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಶಾಸ್ತ್ರೀ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ವತಿಯಿಂದ ಮಂಗಳವಾರ ಅಪರ ಜಿಲ್ಲಾಽಕಾರಿ ಡಾ. ಔದ್ರಾಮಗೆ ಮನವಿ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷೆ ಲಕ್ಷಿ÷್ಮಂಬಾಯಿ ಅಣೇಕಲ್ ಮಾತನಾಡಿ, ಶಾಸ್ತ್ರೀ ನಗರ ಸ್ಲಂ ಕರ್ನಾಟಕ ಕೊಳಗೇರಿ ಅಭಿವೃದ್ದಿ ಕಾಯಿದೆ ಅಡಿ 2008 ರಲ್ಲಿ ಘೋಷಣೆಯಾಗಿದೆ. ಅಲ್ಲಿ ವಾಸಿಸುವ ಎಲ್ಲ ನಿವಾಸಿಗಳಿಗೆ ಕರ್ನಾಟಕ ಕೊಳಗೇರಿ ಮಂಡಳಿಯಿAದ ಪರಿಚಯ ಪತ್ರಗಳು ವಿತರಣೆಯಾಗಿವೆ ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸ್ಲಂಗಳಲ್ಲಿ ಮನೆಗಳು ನಿರ್ಮಾಣ ಮಾಡಲು ವಿಜಯಪುರ ನಗರದಲ್ಲಿ ಆದೇಶÀ ಮೊಟ್ಟ ಮೊದಲು ಮನೆಗಳ ನಿರ್ಮಾಣಕ್ಕಾಗಿ ಶಾಸ್ತ್ರೀ ನಗರ ಸ್ಲಂ ಅನ್ನು ಆಯ್ಕೆ ಮಾಡಲಾಗಿತ್ತು.
ಈ ಕುರಿತು ಅಲ್ಲಿನ ನಿವಾಸಿಗಳ ಜತೆಗೆ ಮಂಡಳಿಯಿಂದ ನಾಲ್ಕೈದು ಸಭೆಗಳು ನಡೆಸಲಾಗಿತ್ತು.
ಅಲ್ಲದೇ, ಕರ್ನಾಟಕ ಕೋಳಗೇರಿ ಅಭಿವೃದ್ದಿ ಮಂಡಳಿ ಬೆಂಗಳೂರು ಅವರ ಹೆಸರಿನಲ್ಲಿ ಅಲ್ಲಿನ ನಿವಾಸಿಗಳು 50 ಸಾವಿರ ರೂಪಾಯಿ ಡಿಡಿ ತೆಗೆದು ಮನೆ ನಿರ್ಮಾಣಕ್ಕಾಗಿ ಹಣ ಭರಿಸಿದ್ದರು. ಸದ್ಯ 7 ವರ್ಷ ಕಳೆದರೂ ಕೂಡ ಮನೆಗಳ ನಿರ್ಮಾಣದ ಮಾತನ್ನೆ ಮರೆತು ಬಿಟ್ಟಿದ್ದಾರೆ ಎಂದು ದೂರಿದರು.
ಇತ್ತಿಚೇಗೆ ಶಾಸಿöÃ ನಗರ ಸ್ಲಂಗೆ ಮಹಾನಗರ ಪಾಲಿಕೆ ಸಿಬ್ಬಂದಿ ಬಂದು ಅಲ್ಲಿನ ನಿವಾಸಿಗಳಿಗೆ ಮನೆಗಳು ತೆರವು ಮಾಡುವಂತೆ ಹೇಳುತ್ತಿದ್ದಾರೆ. ಈಗಾಗಲೇ, ಶಾಸಿöÃ ನಗರ ಸ್ಲಂ ಸಮಸ್ಯೆ ಹೈಕೋರ್ಟ್ನಲ್ಲಿದೆ.
ಮುಂದಿನ ದಿನಗಳಲ್ಲಿ ಏನಾದರೂ ಸ್ಲಂನಲ್ಲಿ ಘಟನೆ ನಡೆದರೆ ಅದಕ್ಕೆ ಮಹಾನಗರ ಪಾಲಿಕೆಯೇ ಹೊಣೆಯಾಗಬೇಕಾಗುತ್ತದೆ. ಜಿಲ್ಲಾಡಳಿತ ಕೂಡಲೇ ಅಲ್ಲಿನ ಸ್ಲಂ ನಿವಾಸಿಗಳ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.