ಅಧ್ಯಾತ್ಮದಿಂದ ಆಂತರಿಕ ಪರಿವರ್ತನೆ

ಮಹಾಲಿAಗಪುರ ಪಟ್ಟಣದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳು ಸದ್ಭಾವನ ಯಾತ್ರೆ. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು, ಸಿದ್ಧರಾಮ ಶಿವಯೋಗಿಗಳು, ಶಿವಶಾಂತವೀರ ಸ್ವಾಮಿಗಳು, ಇತರರಿದ್ದರು.
ಮಹಾಲಿAಗಪುರ ಪಟ್ಟಣದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳು ಸದ್ಭಾವನ ಯಾತ್ರೆ. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು, ಸಿದ್ಧರಾಮ ಶಿವಯೋಗಿಗಳು, ಶಿವಶಾಂತವೀರ ಸ್ವಾಮಿಗಳು, ಇತರರಿದ್ದರು.
Published on
ಮಹಾಲಿಂಗಪುರ : ಅಧ್ಯಾತ್ಮ ಪ್ರವಚನ ನೀಡಲು ಬೆಲ್ಲದ ನಾಡಿಗೆ ಆಗಮಿಸಿದ ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳಿಗೆ ಸಾಂಪ್ರದಾಯಕವಾಗಿ ಸ್ವಾಗತ ಕೋರಲಾಯಿತು. ಪಟ್ಟಣದ ಮಹಾಲಿಂಗೇಶ್ವರ ಮಠದಲ್ಲಿ ಸಂಸ್ಥಾನದ ಪೀಠಾಽಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಕೊಪ್ಪಳ ಶ್ರೀಗಳನ್ನು ಬರಮಾಡಿಕೊಂಡರು.
ನಂತರ ಶ್ರೀ ಮಹಾಲಿಂಗೇಶ್ವರ ದರ್ಶನ ಪಡೆದ ಗವಿಸಿದ್ಧೇಶ್ವರ ಶ್ರೀಗಳು ಮಹಾಲಿಂಗೇಶ್ವರ ಶ್ರೀಗಳೊಂದಿಗೆ ಪಾದಯಾತ್ರೆ ಪ್ರಾರಂಭಿಸಿದರು. ರನ್ನಬೆಳಗಲಿ ಸಿದ್ಧರಾಮ ಶಿವಯೋಗಿಗಳು, ಶಿವಶಾಂತವೀರ ಸ್ವಾಮಿಗಳು ಸಾಥ್ ನೀಡಿದರು. ಬಯಲು ಬಯಲಾಯಿತಯ್ಯಾ ಬಯಲು ಜೀವನ ಬಯಲು ಭಾವನೆ ಸೇರಿ ವಿವಿಧ ಭಜನಾ ಗೀತೆಗಳನ್ನು ಪ್ರಸ್ತುತಪಡಿಸಿದರು.
ದೇವಸ್ಥಾನದಿಂದ ಪ್ರಾರಂಭವಾದ ಸದ್ಭಾವನಾ ಪಾದಯಾತ್ರೆ ನಡುಚೌಕಿ, ಯಲ್ಲಮ್ಮನಗುಡಿ, ಕುಬಸದ ಗಲ್ಲಿ, ನೀಲಕಂಠೇಶ್ವರ ಮಠದ ರಸ್ತೆ ಮುಖಾಂತರ ಬುದ್ನಿ ಪಿಡಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ಕೊಪ್ಪಳದ ಪ್ರಶಾಂತ ದೇವರು ಮಾತನಾಡಿ, ಸಾಮಾನ್ಯವಾಗಿ ರಸ್ತೆಯುದ್ದಕ್ಕೂ ನಾವು ಗುಟಕಾ ಕಲೆಗಳನ್ನು ನೋಡುತ್ತೇವೆ. ಆದರೆ ಇಂದು ಶುಚಿಗೊಳಿಸಲಾದ ರಸ್ತೆಯಲ್ಲಿ ರಂಗೋಲಿ ಚಿತ್ತಾರ ಕಂಡು ಸಂತೋಷವಾಯಿತು. ಇದುವೇ ಪರಿವರ್ತನೆ. ಇದು ಬಾಹ್ಯ ಪರಿವರ್ತನೆ ಇದರಂತೆ ಆಂತರಿಕ ಪರಿವರ್ತನೆ ಕೂಡಾ ಆಗಬೇಕು. ಇದಕ್ಕಾಗಿಯೆ ಆಧ್ಯಾತ್ಮ ಪ್ರವಚನ ಇರುವುದು.
ಇದು ಬದುಕನ್ನು ಬದಲಾವಣೆ ಮಾಡುತ್ತದೆ. ಈ ಜಗ ದೇವನ ಮನೆ ನಾವು ಇಲ್ಲಿ ಬಾಡಿಗೆದಾತರು ಎಂದು ಶರಣರು ಹೇಳಿದ್ದಾರೆ. ಈ ಜಗತ್ತು ನಾವು ಬರುವುದಕ್ಕಿಂತ ಮುಂಚೆ ಇತ್ತು. ನಾವು ಹೋದ ನಂತರವೂ ಇರುತ್ತದೆ. ಈ ಬಾಡಿಗೆ ಮನೆಯಲ್ಲಿ ಹಲವು ವರ್ಷ ಹಲವು ದಿನ ಬದುಕಿ ಮರಳುವುದೇ ಜೀವನ ಎಂದರು.
ಪಾದಯಾತ್ರೆಯುದ್ಧಕ್ಕೂ ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು. ವಿವಿಧ ಬಣ್ಣಗಳ ರಂಗೋಲಿ ಚಿತ್ತಾರ ಆಕರ್ಷಕವಾಗಿತ್ತು. ಹಿಂದು- ಮುಸ್ಲಿಂ ಸೇರಿ ಸರ್ವ ಧರ್ಮದ ನೂರಾರು ಭಕ್ತರು ಭಾಗಿಯಾಗಿ ಭಾವೈಕ್ಯತೆ ಮೆರೆದರು. ಚುಮು ಚುಮು ಚಳಿಯ ನಡುವೆಯೂ ಸದ್ಭಾವನ ಯಾತ್ರೆ ಉಲ್ಲಾಸ ಮೂಡಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net