ಮನೆ ಹಂಚಿಕೆಯಲ್ಲಿ ಅನ್ಯಾಯ

ಮನೆ ಹಂಚಿಕೆಯಲ್ಲಾದ ಅನ್ಯಾಯ  ಖಂಡಿಸಿ ಕೆ.ಆರ್.ಎಸ್ ಪಕ್ಷದಿಂದ ತಾಲೂಕು ಪಂಚಾಯತಿ ಇಒಗೆ ಮನವಿ ಸಲ್ಲಿಸಲಾಯಿತು. ಖಾದೀರಸಾಬ ಕುಳಗೇರಿ, ಸಂತೋಷ ಕಣ್ಣೂರ, ಜಿನಬಿ ಹುಣಶ್ಯಾಳ ಹಾಗೂ ಮೆಹಬೂಬ ತಾಂಬೋಳಿ ಇದ್ದರು.
ಮನೆ ಹಂಚಿಕೆಯಲ್ಲಾದ ಅನ್ಯಾಯ ಖಂಡಿಸಿ ಕೆ.ಆರ್.ಎಸ್ ಪಕ್ಷದಿಂದ ತಾಲೂಕು ಪಂಚಾಯತಿ ಇಒಗೆ ಮನವಿ ಸಲ್ಲಿಸಲಾಯಿತು. ಖಾದೀರಸಾಬ ಕುಳಗೇರಿ, ಸಂತೋಷ ಕಣ್ಣೂರ, ಜಿನಬಿ ಹುಣಶ್ಯಾಳ ಹಾಗೂ ಮೆಹಬೂಬ ತಾಂಬೋಳಿ ಇದ್ದರು.
Published on
ದೇವರಹಿಪ್ಪರಗಿ: ತಾಲೂಕಿನ ಮಣ್ಣೂರ ಮತ್ತು ಹುಣಶ್ಯಾಳ ಗ್ರಾಮ ಪಂಚಾಯಿತಿಯಲ್ಲಿ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಗ್ರಾಮ ಸಭೆ ನಡೆಸದೆ ಮನೆ ಹಂಚಿಕೆ ಮಾಡಿರುವುದನ್ನು ಖಂಡಿಸಿ ತಾಪಂ ಇಒಗೆ ಕೆ.ಆರ್.ಎಸ್. ಪಕ್ಷದ ಪದಾಽಕಾರಿಗಳು ಪಕ್ಷದ ಪದಾಽಕಾರಿಗಳು ತನಿಖೆ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಕೆ.ಆರ್.ಎಸ್. ಪಕ್ಷದ ತಾಲೂಕು ಅಧ್ಯಕ್ಷ ರಾಘವೇಂದ್ರ ಚಲವಾದಿ ಮಾತನಾಡಿ, ಮಣ್ಣೂರು, ಹೂಣಶ್ಯಾಳ ಗ್ರಾಮ ಪಂಚಾಯಿತಿ ಮನೆ ಹಂಚಿಕೆ ಅವ್ಯವಹಾರ ಮಾತ್ರವಲ್ಲದೆ ಲಂಚ, ಹೆಚ್ಚಿನ ಜಿಪಿಎಸ್ ಶುಲ್ಕ ಹಾಗೂ ಗ್ರಾಮ ಸಭೆ ಕರೆಯದೆ, ಮನೆ ಹಂಚಿಕೆ ಮಾಡಲಾಗಿದೆ. ಸರಿಯಾಗಿ ಮನೆಗಳನ್ನು ವರ್ಗವಾರು ಹಂಚದಿರುವುದರಿಂದ ಅರ್ಹರಿಗೆ ಅನ್ಯಾಯವಾಗಿದೆ. ಪಂಚಾಯತ್ ರಾಜ್ಯ ವಸತಿ ಯೋಜನೆ ಕಾಯ್ದೆಯ ಮಾರ್ಗಸೂಚಿ ಹಾಗೂ ಸಾಮಾಜಿಕ ನ್ಯಾಯ ತತ್ವಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net