ಇಂಡಿ ಪೊಲೀಸರ ಮೇಲೆ ಕ್ರಮಕ್ಕೆ ಒತ್ತಾಯ

ವಿಜಯಪುರ ಜಿಲ್ಲಾಡಳಿತಕ್ಕೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸಂಘದ ಪ್ರಮುಖರಾದ ರಾಜಶೇಖರ ದೈವಾಡಿ, ವಿಜಯಕುಮಾರ ಹತ್ತಿ, ಜುಬೇರ ಕೆರೂರ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸಂಘದ ಪ್ರಮುಖರಾದ ರಾಜಶೇಖರ ದೈವಾಡಿ, ವಿಜಯಕುಮಾರ ಹತ್ತಿ, ಜುಬೇರ ಕೆರೂರ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಾಪನ ಇಲಾಖೆ ಸಿಬ್ಬಂದಿಗೆ ಕಿರುಕುಳ
  • ಸರ್ಕಾರಿ ನೌಕರರ ಸಂಘದಿಂದ ಖಂಡನೆ
ವಿಜಯಪುರ: ಭೂಮಾಪನ ಇಲಾಖೆ ಸಿಬ್ಬಂದಿಗೆ ಕಿರುಕುಳ ನೀಡಿದ್ದಲ್ಲದೇ ನಿಯಮ ಬಾಹಿರವಾಗಿ ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮ ಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ, ಇಂಡಿ ತಾಲೂಕಿನ ಭೂಮಾಪನ ಇಲಾಖೆಯ ಸಿಬ್ಬಂದಿಗೆ ಕಿರುಕುಳ ನೀಡಲಾಗಿದೆ. ಅನವಶ್ಯಕವಾಗಿ ತೊಂದರೆಯನ್ನುಂಟು ಮಾಡಿರುವ ಪೊಲೀಸರು ನಿಯಮ ಬಾಹಿರವಾಗಿ ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಹೀಗಾಗಿ ಕೂಡಲೇ ಎಫ್ಐಆರ್ ರದ್ದುಗೊಳಿಸಬೇಕು. ಕಿರುಕುಳ ನೀಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರನ್ನು ಭೇಟಿ ಮಾಡಿ `ನೌಕರರ ಮೇಲಿನ ದೂರನ್ನು ರದ್ದುಪಡಿಸಿ ನೌಕರರಿಗೆ ನ್ಯಾಯ ಒದಗಿಸುವಂತೆ' ಮನವಿ ಮಾಡಲಾಯಿತು. ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಮನವಿ ಪುರಸ್ಕರಿಸುವ ಭರವಸೆ ನೀಡಿದರು.
ಸಂಘದ ಪ್ರಮುಖರಾದ ರಾಜಶೇಖರ ದೈವಾಡಿ, ವಿಜಯಕುಮಾರ ಹತ್ತಿ, ಜುಬೇರ ಕೆರೂರ, ಶಿವರಾಜ ಬಿರಾದಾರ, ಬಸವರಾಜ ರಾವೂರ, ಎಸ್.ಬಿ. ಮಗ್ಗದ, ಮಹಾಂತೇಶ ಎನ್. ಮುಳಗುಂದ, ಪಿ.ವೈ. ಕಾಂಬಳೆ, ಮುರಗೇಶ ರೂಡಗಿ, ಜಿ.ಬಿ. ವಗ್ಗನ್ನನವರ, ಶಾಂತಪ್ಪ ಅಗಸಬಾಳ, ಡಿ.ಎಚ್. ಅವಟಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net