ವಿಜಯಪುರ : ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಬಳಿಯ ಕೊಕಟನೂರ-ಕಂಟಿಹಳ್ಳ ವಸ್ತಿಯ ಶ್ರೀ ಪರಕಿಲಕ್ಷಿ÷್ಮÃ ದೇವಸ್ಥಾನ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವ ಆ. 26 ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 5.05 ಗಂಟೆಗೆ ತಾರಾಪುರ ಹಿರೇಮಠದ ಗುರುಲಿಂಗ ಶಿವಾಚಾರ್ಯರ ಅಮೃತ ಹಸ್ತದಿಂದ ಶ್ರೀ ಮಹಾಲಕ್ಷಿ÷್ಮÃ ಪ್ರಾಣ ಪ್ರತಿಷ್ಠಾಪನೆ ಹಾಗೂ ಸವದತ್ತಿ ಹಿರೇಮಠದ ಪುಟ್ಟಯ್ಯ ಶಾಸಿöಗಳು ಮತ್ತು ಕೊಕಟನೂರ ಹಿರೇಮಠದ ಅಪ್ಪಯ್ಯ ಅವರಿಂದ ಅಷ್ಟ ರುದ್ರಹೋಮ, ಹವನ, ನವಗ್ರಹ ಪೂಜೆ ಮತ್ತು ಮುತ್ತೆÊದೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು, ನಂತರ ಭವ್ಯ ಮೆರವಣಿಗೆ ಮೂಲಕ ಕುಂಭ-ಕಳಸಗಳ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಧರ್ಮಸಭೆ ಹಮ್ಮಿಕೊಳ್ಳಲಾಗಿದ್ದು, ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸುವರು. ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು, ಕನ್ನೋಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ದೇವೂರ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು ಮತ್ತು ಕರ್ಜಗಿ ಹಿರೇಮಠದ ಶಿವಸೋಮನಾಥ ಶಿವಾಚಾರ್ಯರು ಧರ್ಮಸಭೆಯ ಸಾನ್ನಿಧ್ಯ ವಹಿಸುವರು.
ಮಾಜಿ ಶಾಸಕ ರಮೇಶ ಭೂಸನೂರ ಜ್ಯೋತಿ ಬೆಳಗಿಸುವರು. ಈರಯ್ಯ ಹಿರೇಮಠ, ಗುರುಸ್ವಾಮಿ ಹಿರೇಮಠ, ಶಿವಯ್ಯ ಹಿರೇಮಠ, ಮಲ್ಲಿಕಾರ್ಜುನ ಬುಶೆಟ್ಟಿ ಮತ್ತು ಮಲ್ಲಯ್ಯ ಹಿರೇಮಠ ಉಪಸ್ಥಿತಿ ವಹಿಸುವರು. ಸಂಜೆ 5 ಗಂಟೆಗೆ ಕುಸ್ತಿ ಪಂದ್ಯಗಳು ಮತ್ತು ರಾತ್ರಿ 9 ಗಂಟೆಗೆ ಡೊಳ್ಳಿನ ಪದಗಳ ಗಾಯನ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.