ಮಹನೀಯರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ

ಕತಕನಹಳ್ಳಿ ಗ್ರಾಮದ ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಆರ್.ಎಸ್. ಪಟ್ಟಣಶೆಟ್ಟಿ, ಕೆ.ಎಸ್. ಚಿತ್ತರಗಿ, ಅಪ್ಪಾಸಾಹೇಬ ಕೊಟ್ಯಾಳ ಮತ್ತಿತರರಿದ್ದಾರೆ.
ಕತಕನಹಳ್ಳಿ ಗ್ರಾಮದ ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಆರ್.ಎಸ್. ಪಟ್ಟಣಶೆಟ್ಟಿ, ಕೆ.ಎಸ್. ಚಿತ್ತರಗಿ, ಅಪ್ಪಾಸಾಹೇಬ ಕೊಟ್ಯಾಳ ಮತ್ತಿತರರಿದ್ದಾರೆ.
Published on
ಇಂದಿನ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕಾದರೆ ಜೀವನದಲ್ಲಿ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಾಗ್ಮಿ ಆರ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿರುವ ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ೭ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ಹೋರಾಟದಲ್ಲಿ ಮಹಾನ್ ವ್ಯಕ್ತಿಗಳಾದ ಭಗತಸಿಂಗ, ರಾಜಗುರು ಮತ್ತು ಸುಖದೇವ ಅವರು ಬ್ರಿಟಿಷರ ಜತೆಗೆ ಹೋರಾಡಿ ತಮ್ಮ ಪ್ರಾಣವನ್ನೇ ಭಾರತ ದೇಶಕ್ಕೆ ಅರ್ಪಿಸಿದ್ದಾರೆ. ಬ್ರಿಟಿಷ ಜೈಲಾಧಿಕಾರಿಗಳು ಗಲ್ಲಿಗೇರಿಸುವ ಸಮಯದಲ್ಲೂ ಅವರು ತಮ್ಮ ದೇಶಪ್ರೇಮ ಬಿಡಲಿಲ್ಲ. ಅಂತಹ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಪ್ರೇಮ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅತಿಥಿ ಶಿಕ್ಷಣ ಇಲಾಖೆಯ ಹಿಟ್ಟಿನಹಳ್ಳಿ ಕ್ಲಸ್ಟರ್ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಚಿತ್ತರಗಿ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಆಧುನಿಕ ಯುಗದಲ್ಲಿ ಸೈನಿಕ ಶಾಲೆ, ಕಿತ್ತೂರು, ನವೋದಯ ಪ್ರವೇಶ ಪರೀಕ್ಷೆಗಳ ತರಬೇತಿ ಪಡೆದು ಅಂತಹ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ಶುಲ್ಕ ರಹಿತ ಶಾಲೆಗೆ ಪ್ರವೇಶ ಪಡೆಯಲು ಪ್ರಯತ್ನಿಸಬೇಕು. ಅದರಿಂದ ಪಾಲಕರ ಹಣಕಾಸಿನ ಹೊರೆ ಇಳಿಸಿದಂತಾಗುತ್ತದೆ ಎಂದರು.
ಗ್ರಾಮದ ಹಿರಿಯರಾದ ಅಪ್ಪಾಸಾಹೇಬ ಕೊಟ್ಯಾಳ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕ ಅರವಿಂದ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಿಕ್ಷಕಿ ಇಂದುಮತಿ ಪತ್ತಾರ ನಿರೂಪಿಸಿದರು. ಶಿಕ್ಷಕಿ ಕವಿತಾ ಬೆಳ್ಳುಂಡಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net