ಜ್ಞಾನದಿಂದ ಜೀವನದಲ್ಲಿ ಉನ್ನತ ಅವಕಾಶ

ವಿಜಯಪುರದ ವಿ.ಭ. ದರಬಾರ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಿ.ಬಿ. ಗ್ರಾಮಪುರೋಹಿತ, ಎಸ್.ಬಿ. ಕುಂಬಾರ, ಎ.ಎಸ್. ಕುಲಕರ್ಣಿ ಮತ್ತಿತರರಿದ್ದಾರೆ.
ವಿಜಯಪುರದ ವಿ.ಭ. ದರಬಾರ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಿ.ಬಿ. ಗ್ರಾಮಪುರೋಹಿತ, ಎಸ್.ಬಿ. ಕುಂಬಾರ, ಎ.ಎಸ್. ಕುಲಕರ್ಣಿ ಮತ್ತಿತರರಿದ್ದಾರೆ.
Published on

ವಿಜಯಪುರ : ವಿದಾರ್ಥಿಗಳು ಜ್ಞಾನ ಮತ್ತು ಕೌಶಲಗಳನ್ನು ಸಂಪಾದಿಸಿದ್ದಲ್ಲಿ ಜೀವನದಲ್ಲಿ ಉನ್ನತ ಅವಕಾಶಗಳು ಹುಡುಕಿಕೊಂಡು ಬರಲಿವೆ ಎಂದು ವಿದ್ಯಾವರ್ಧಕ ಸಂಘದ ಸಮನ್ವಯಾಽಕರಿ ಡಾ. ವಿ.ಬಿ. ಗ್ರಾಮಪುರೋಹಿತ ಹೇಳಿದರು.

ನಗರದ ವಿದ್ಯಾ ವರ್ಧಕ ಸಂಘದ ವಿ.ಭ. ದರಬಾರ ಪ.ಪೂ. ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾಣಿಜ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಎಸ್.ಬಿ. ಕುಂಬಾರ ಮಾತನಾಡಿ, ಗುರಿ ಸಾಽಸುವ ನಿಟ್ಟಿನಲ್ಲಿ ನಿರಂತರ ಪರಿಶ್ರಮ ಹಾಗೂ ಸಮಯದ ಸದ್ಬಳಕೆ ಮುಖ್ಯವಾಗಿದೆ ಎಂದು ತಿಳಿಸಿದರು.
ಹಿರಿಯ ಉಪನ್ಯಾಸಕ ನಾಗರಾಜ ಎ. ಮಾತನಾಡಿ, ಒಳ್ಳೆಯ ನಿರ್ಧಾರಗಳ ಮೂಲಕ ನೀತಿಯುತ ವಾಣಿಜ್ಯ ಹಾಗೂ ವ್ಯಾಪಾರ ಚಟುವಟಿಕೆಗಳು ದೇಶದ ಪ್ರಗತಿಗೆ ಪೂರಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಉಪನ್ಯಾಸಕಿ ಎ.ಎಸ್. ಕುಲಕರ್ಣಿ ಮತ್ತು ಉಪನ್ಯಾಸಕ ಜಿ.ಬಿ. ಕುಲಕರ್ಣಿ ಮಾತನಾಡಿದರು.
ಉಪನ್ಯಾಸಕಿ ರೋಹಿಣಿ ತೆಗ್ಗಿ ಹಾಗೂ ಭಾಗ್ಯಶ್ರೀ ಹರವಾಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಿದ್ಧ ಪಡಿಸಿದ ವಾಣಿಜ್ಯ ಮಾದರಿಗಳು ಪ್ರದರ್ಶಿಸಿದರು. ಗೀತಾ ಪ್ರಾರ್ಥಿಸಿದರು. ರಾಽಕಾ ಚಲವಾದಿ ಮತ್ತು ಅಮರೇಶ ನಿರೂಪಿಸಿದರು. ಐಶ್ವರ್ಯ ಚವ್ಹಾಣ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net