ಹರ್ ಘರ್ ತಿರಂಗಾ ಅಭಿಯಾನ, 300 ಮೀಟರ್ ಉದ್ದದ ಧ್ವಜ ಮೆರವಣಿಗೆ

ವಿಜಯಪುರ ನಗರದಲ್ಲಿ ಬಿಜೆಪಿಯಿಂದ ಹರ್ ಘರ್ ತಿರಂಗಾ ಅಭಿಯಾನದಂಗವಾಗಿ ಬೃಹತ್ ಧ್ವಜ ಮೆರವಣಿಗೆ ನಡೆಯಿತು.
ವಿಜಯಪುರ ನಗರದಲ್ಲಿ ಬಿಜೆಪಿಯಿಂದ ಹರ್ ಘರ್ ತಿರಂಗಾ ಅಭಿಯಾನದಂಗವಾಗಿ ಬೃಹತ್ ಧ್ವಜ ಮೆರವಣಿಗೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿಯಿಂದ ಬೃಹತ್ ಜಾಥಾ
  • ಸಿದ್ಧೇಶ್ವರ ದೇವಸ್ಥಾನ ಬಳಿ ಚಾಲನೆ
  • ಪ್ರಮುಖ ಮಾರ್ಗಗಳಲ್ಲಿ ಸಂಚಾರ

ವಿಜಯಪುರ: ‘ಹರ್ ಘರ್ ತಿರಂಗಾ ಅಭಿಯಾನ’ದ ಅಂಗವಾಗಿ ಬಿಜೆಪಿಯಿಂದ ಗುರುವಾರ ಬೃಹತ್ ಜಾಥಾ ನಡೆಯಿತು.

ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾಪೌರರಾದ ಎಂ.ಎಸ್. ಕರಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಹಾಗೂ ಮಾಜಿ ಸೈನಿಕರು ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಜಾಥಾದಲ್ಲಿ 300 ಮೀಟರ್ ಉದ್ದದ ಧ್ವಜ ಹಿಡಿದ ಕಾರ್ಯಕರ್ತರು ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ‘ಭಾರತ ಮಾತಾ ಕಿ ಜೈ.. ವಂದೇ ಮಾತರಂ...’ ಘೋಷಣೆಗಳು ಮೊಳಗಿದವು.
ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ರಾಮಪ್ಪ ಎಲ್.ಕೆ ಮಾತನಾಡಿ, ಪ್ರತಿಯೊಬ್ಬರೂ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರಪ್ರೇಮ ಮತ್ತು ದೇಶಾಭಿಮಾನವನ್ನು ಹೆಚ್ಚಿಸುವುದೇ ಹರ್ ಘರ್ ತಿರಂಗಾ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಂದು ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಉಮೇಶ ಕಾರಜೋಳ, ಗೋಪಾಲ ಘಟಕಂಬಾಳೆ, ಮಹಾಪೌರ ಸುಮಿತ್ರಾ ಜಾಧವ, ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ಪ್ರಕಾಶ ಅಕ್ಕಲಕೋಟ, ಭೀಮಾಶಂಕರ ಹದನೂರ, ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ಶಿವರುದ್ರ ಬಾಗಲಕೋಟ, ಜವಾಹರ ಗೋಸಾವಿ, ವಿಠ್ಠಲ ಹೊಸಪೇಟ, ಮಹೇಶ ಒಡೆಯರ, ಈರಣ್ಣ ರಾವೂರ, ಕೃಷ್ಣ ಗುನ್ಹಾಳಕರ, ರಾಜೇಶ ತಾವಸೆ, ರಮೇಶ ಬಿದನೂರ, ಮಹೇಂದ್ರ ನಾಯಿಕ, ಬಸವರಾಜ ಬೈಚಬಾಳ, ಶ್ರೀಕಾಂತ ಶಿಂಧೆ, ಮಂಜುನಾಥ ಮೀಸೆ, ಭರತ ಕೋಳಿ, ವಿಜಯ ಜೋಶಿ, ಈರಣ್ಣ ಪಟ್ಟಣಶೆಟ್ಟಿ, ಉಮೇಶ ವಂದಾಲ, ಪರಶುರಾಮ ರಜಪೂತ, ಪಾಪುಸಿಂಗ ರಜಪೂತ, ರಾಘವ ಅಣ್ಣಿಗೇರಿ, ಶಿವಾನಂದ ಭುಯಾರ, ಚಿನ್ನು ಚಿನಗುಂಡಿ, ಆನಂದ ಮುಚ್ಚಂಡಿ, ಶ್ರೀಧರ ಬಿಜ್ಜರಗಿ, ವಿನೋದ ಪತ್ತಾರ, ಹಣಮಂತ ಭಜಂತ್ರಿ, ಪ್ರವೀಣ ಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net