ಕ್ಷೀರ ಯೋಜನೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡುವ ಮುನ್ನ ಬಿಎಲïಡಿಇ ಡೀಮ್ಡï ವಿವಿಯ ಕುಲಾಽಪತಿ ಬಸನಗೌಡ ಪಾಟೀಲರು ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದ ರೈತ ಸಾಹೇಬಗೌಡ ಪಾಟೀಲ ಅವರ ಜಮೀನಿಗೆ ಭೇಟಿ ನೀಡಿದರು. ಮಹಾಂತೇಶ ಬಿರಾದಾರ, ಸಿ.ಎಂ. ಪಾಟೀಲ, ಸಂತೋಷ ಬಿರಾದಾರ ಮತ್ತಿತರರಿದ್ದಾರೆ
ವಿಜಯಪುರ : ಇಂದು ನಾವು ಸಮಾಜದಲ್ಲಿ ಅಭಿವೃದ್ಧಿ, ಶಿಕ್ಷಣ ಮತ್ತು ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವುದು ವಚ್ಞ ಪಿತಾಮಹ ಡಾ. -À.ಗು. ಹಳಕಟ್ಟಿಯವರ ತ್ಯಾಗ ಮತ್ತು ಶ್ರಮದಿಂದ ಬಂದಿz್ದÁಗಿದೆ. ಅಂತಹ ಹಳಕಟ್ಟಿಯವರನ್ನು ಸೇವೆಯನ್ನು ಸದಾ ಸ್ಮರಿಸುತ್ತಿರುವ ಬಿಎಲ್‌ಡಿಇ ಸಂಸ್ಥೆಯ ಕಾರ್ಯ ಅನುಪಮವಾದುದು ಎಂದು ನಿಡೋಣಿ ವಿರಕ್ತ ಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ದಾಶ್ಯಾಳ ರಸ್ತೆಯ ವಿರಕ್ತ ಮಠಕ್ಕೆ ಸೇರಿದ 11 ಎಕರೆ ಜಮೀನಿನಲ್ಲಿ ವಚನಪಿತಾಮಹ ಡಾ -À.ಗು. ಹಳಕಟ್ಟಿ ಅವರ ಜನ್ಮದಿನದಂಗವಾಗಿ ಬಿಎಲïಡಿಇ ಸಂಸ್ಥೆ, ಅಕ್ಷಯಕಲ್ಪ ಮತ್ತು ಕೃಷಿಕಲ್ಪ ಸಹಯೋಗದಲ್ಲಿ ಕೈಗೊಂಡಿರುವ ಕ್ಷೀರ ಯೋಜನೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ಇಂದು ಬಸವಾದಿ ಶರಣ ವಚನ ಸಾಹಿತ್ಯ ನಮಗೆ ಸಿಗಲು ಹಳಕಟ್ಟಿಯವ ಪಾತ್ರ ದೊಡ್ಡದು. ಅಂತಹ ಹಳಕಟ್ಟಿ ಅವರನ್ನು ಜನಮಾನಸದಲ್ಲಿ ಶಾಶ್ವತವಾಗಿರಿಸಿದವರು ಬಿಎಲïಡಿಇ ಸಂಸ್ಥೆಯವರು ಎಂದರು.
ರೈತರು ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳುವ ಜತೆಗೆ ಆರೋಗ್ಯ, ಸ್ವಚ್ಛತೆ ಹಾಗೂ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪೂರಕ ವ್ಯವಸ್ಥೆ ಕಲ್ಪಿಸುವುದರಿಂದ ಹಸು ನಮಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಒದಗಿಸಲು ಸಾಧ್ಯ ಎಂದು ಸಾಬೀತು ಪಡಿಸಿದ ಅಕ್ಷಯಕಲ್ಪ ಹಾಗೂ ಕೃಷಿಕಲ್ಪ -Ëಂಡೇಷನ್‌ಗಳ ಸಹಕಾರದಲ್ಲಿ ಬಿಎಲïಡಿಇ ಡೀಮ್ಡï ವಿವಿ ಸಹಯೋಗದಲ್ಲಿ ಕ್ಷೀರ ಯೋಜನೆ ಜಾರಿಗೆ ತಂದಿz್ದÁರೆ. ರೈತರ ಬಗ್ಗೆ ಕಾಳಜಿಯಿಂದ ಸರ್ಕಾರಿಂದ ರೈತರ ಜಮೀನುಗಳಿಗೆ ನೀರು ಒದಗಿಸಿ, ನಂತರ ಸಂಸ್ಥೆಯ ಮೂಲಕ ಹೈನುಗಾರಿಕೆಗೂ ಉತ್ತೇಜನ ನೀಡುತ್ತಿರುವ ಸಚಿವ ಎಂ.ಬಿ. ಪಾಟೀಲರಿಗೆ ಅಭಿನಂದಿಸುವೆ ಎಂದು ಶ್ರೀಗಳು ತಿಳಿಸಿದರು.
ಬಿಎಲïಡಿಇ ಡೀಮ್ಡï ವಿವಿಯ ಕುಲಾಽಪತಿ ಬಸನಗೌಡ ಪಾಟೀಲ ಮಾತನಾಡಿ, ಮಹಾನಗರಗಳಲ್ಲಿರುವ ದೊಡ್ಡ ದೊಡ್ಡ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿರುವ ಸಾಲಿನಲ್ಲಿ ರೈತರು ಹೈನುಗಾರಿಕೆಯಿಂದ ಮೇಲೆ ಬರಬೇಕು ಎಂಬ ಉದ್ದೇಶದಿಂದ ಕ್ಷೀರ ಯೋಜನೆ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಈ ಯೋಜನೆ ಪ್ರಾರಂಭವಾದ ನಂತರ ರೈತರ ಮೊಗದಲ್ಲಿ ಸಂತಸ ವ್ಯಕ್ತವಾಗಿದೆ. ಈ ಮಾದರಿಯನ್ನು ಎಲ್ಲರೂ ಅಳವಡಿಸಿಕೊಂಡಲ್ಲಿ, ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಅಕ್ಷಯಕಲ್ಪ -Ëಂಡೇಷನ್ ಸಿಇಒ ಸಿ.ಎಂ. ಪಾಟೀಲ ಮಾತನಾಡಿ, ಯುವ ರೈತರಿಗೆ ಹಸುಗಳ ಆರೈಕೆಗೆ ಅಗತ್ಯ ತಿಳಿವಳಿಕೆ ಇಲ್ಲದೆ ಹೋದಾಗ ಅವರ ಆದಾಯದಲ್ಲಿ ಕುಂಠಿತವಾಗುತ್ತದೆ. ಹೀಗಾಗಿ, ಮೊದಲು ಹಸುಗಳ ಕೊಟ್ಟಿಗೆ, ಆಹಾರ ಪದ್ಧತಿಗಳನ್ನು ಅನುಸರಿಸುವುದರ ಮೂಲಕ ಹೈನುಗಾರಿಕೆಯಲ್ಲಿ ಉತ್ತಮ -Àಲಿತಾಂಶ ಪಡೆಯಬಹುದಾಗಿದೆ. ಈ ಮಾದರಿ ಕಾರ್ಯವನ್ನು ಆಯ್ದ ಗ್ರಾಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಽಕಾರಿ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಅಕ್ಷಯಕಲ್ಪ, ಹೈನುಗಾರಿಕೆಗೆ ಪ್ರಸಿದ್ದಿಯಾಗಿದ್ದು, ತಿಪಟೂರಿನ ರೈತರು ಇದರ ಸದುಪಯೋಗ ಪಡೆಸಿಕೊಂಡು ಆರ್ಥಕವಾಗಿ ಸಬಲರಾಗಿz್ದÁರೆ. ಸದರಿ ಯೋಜನೆಗೆ ಬಿಎಲïಡಿಇ ಡೀಮ್ಡï ವಿವಿ ವತಿಯಿಂದ ಪ್ರತಿವರ್ಷ 50 ಲಕ್ಷ ರೂ. ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೈತಮುಖಂಡ ಶ್ರೀಶೈಲಗೌಡ ಪಾಟೀಲ ಮಾತನಾಡಿದರು.
ಪೈಲಟ್ ಯೋಜನೆ ಸಿಬ್ಬಂದಿಗಳಾದ ಈರಣ್ಣ ರೊಟ್ಟಿ, ಸಂತೋಷ ಬಿರಾದಾರ, ರಾಜಕುಮಾರ ಕುಮಠೆ, ಶಾನು ಸಾರವಾಡ, ಜಬ್ಬಾರ ಇನಾಮದಾರ, ಪ್ರಭುಲಿಂಗ ಬಿರಾದಾರ, ಶಿವಪುತ್ರ ಕೊಲಕಾರ ಮತ್ತು ಶರಣು ರೆಬಿನಾಳ ಅವರನ್ನು ಸನ್ಮಾನಿಸಲಾಯಿತು.