ವಿಜಯಪುರ : ನಗರದ ಹುಂಡೇಕಾರ ಅಸೋಸಿಯೇಟ್ಸ್ನಲ್ಲಿ ಜಿ¯್ಲÁ ತೆರಿಗೆ ಸಲಹೆಗಾರ ಸಂಘದ ವತಿಯಿಂದ ಬುಧವಾರ 9ನೇ ಜಿಎಸ್‌ಟಿ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿವೇಕ ಹುಂಡೇಕಾರ ಮಾತನಾಡಿ, ಜಿಎಸ್‌ಟಿ ಜಾರಿಯಾಗಿ ಒಂಬತ್ತು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದೇಶದ ಏಕೀಕೃತ ತೆರಿಗೆ ವ್ಯವಸ್ಥೆಯ ಯಶಸ್ಸಿನ ಕುರಿತು ಸ್ಮರಿಸಿದರು. ಅಲ್ಲದೆ, ತೆರಿಗೆ ವೃತ್ತಿನಿರತರು ತೆರಿಗೆದಾರರಿಗೆ ಜÁಗೃತಿ ಮೂಡಿಸುವಲ್ಲಿ ಹಾಗೂ ಸರ್ಕಾರದ ತೆರಿಗೆ ಸಂಗ್ರಹವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿz್ದÁರೆ ಎಂದು ತಿಳಿಸಿದರು.
ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶ್ರೇಯಸ್ ಮಂಡಿನಮಠ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ, ಮುಂದಿನ ವೃತ್ತಿ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಶುಭ ಹಾರೈಸಲಾಯಿತು.
ಸಂಘದ ಉಪಾಧ್ಯಕ್ಷ ರುದ್ರಗೌಡ ಪಾಟೀಲ, ಹಿರಿಯ ಸದಸ್ಯರಾದ ವೀರಣ್ಣ ಹುಂಡೇಕಾರ, ಎಸ್.ಆರ್. ಮಠಪತಿ, ಆರ್.ಬಿ. ಪಾಟೀಲ, ಎಂ.ಜಿ. ಕಟ್ಟಿ, ಆರ್.ಐ. ಕೊಲ್ಹಾರ, ಎಸ್.ಬಿ. ಬಿರಾದಾರ, ಕಾರ್ಯದರ್ಶಿ ಅರವಿಂದ ಮಿಣಜಗಿ, ಖಜಾಂಚಿ ನೀಲಕಂಠ ಹೇರಿಮಠ, ಜಂಟಿ ಕಾರ್ಯದರ್ಶಿ ಪ್ರಕಾಶ ಕೋಕಟನೂರ, ಽÃರಜ್ ಲಾಹೋಟಿ ಮತ್ತಿತರರಿದ್ದರು.