ವಿಜಯಪುರದ ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಟ್ರೀ, ಆಫ್, ಲೈಫ್ಎಂಬ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ವಿಠ್ಠಲ ಟಂಕಸಾಲಿ, ಡಾ. ವಿ.ಡಿ. ಐಹೊಳ್ಳಿ ಮತ್ತಿತರರಿದ್ದಾರೆ.
Published on:
Copied
Follow Us
ವಿಜಯಪುರ: ಗಿಡ-ಮರಗಳು ನಮ್ಮ ಬದುಕಿನ ಅಂಗವಾಗಬೇಕು ಎಂದು ಬಿಎಲ್‌ಡಿಇ ಇಂಜನೀಯರಿAಗ್ ಕಾಲೇಜಿನ ಪ್ರಾಧ್ಯಾಪಕ ವಿಠ್ಠಲ ಟಂಕಸಾಲಿ ಹೇಳಿದರು.
ಇಂಟ್ಯಾಚ್ ನ್ಯೂ ದೆಹಲಿ ಸಹಯೋಗದಲ್ಲಿ ನಗರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ `ಎಂಬ ಕಾರ್ಯಕ್ರಮದಲ್ಲಿ ಬಿತ್ತಿ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಗಿಡಗಳು ಬೆಳೆಯುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು. ಅವು ಆಮ್ಲಜನಕ ನೀಡುವದರಿಂದ ನಮ್ಮ ಬದುಕು ಸ್ವಾಸ್ಥ್ಯವಾಗಲಿದೆ. ನಮ್ಮ ಮುಂದಿನ ಜನಾಂಗಕ್ಕೆ ಕೋಟಿವೃಕ್ಷ ಅಭಿಯಾನದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಿಡಗಳನ್ನು ಬೆಳೆಸಿ ನಾಡು ಹಸಿರನ್ನಾಗಿ ಮಾಡುವುದು ಅತ್ಯವಶ್ಯಕವಾಗಿದೆ ಎಂದರು.
ಡಾ. ಎಂ.ಎಸ್. ಮದಭಾವಿ ಮಾತನಾಡಿ, ಪರಿಸರ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಅಂದಾಗ ಅದು ನಮ್ಮನ್ನು ಕಾಪಾಡುತ್ತದೆ. ನೀವು ಗಿಡಗಳನ್ನು ಹಚ್ಚುವ ಜತೆಗೆ ಅವುಗಳ ಸಂರಕ್ಷಣೆ ಮಾಡಲು ಮುಂದಾಗಬೇಕು. ಅಂದಾಗಲೇ ಪರಿಸರವನ್ನು ಉತ್ತಮವಾಗಿಸಿಕೊಳ್ಳಲು ಸಾಧ್ಯ ಎಂದರು.
ಇಂಟ್ಯಾಚ್ ಸಂಚಾಲಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ಮತ್ತು ಸಾಕ್ಷಿ ಪ್ರಾರ್ಥಿಸಿದರು. ಡಾ. ವಿ.ಡಿ. ಐಹೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಶಾಲೆಗಳಿಂದ 15 ಜನ ಶಿಕ್ಷಕರು 5 ಜನ ಪಾಲಕರು ಹಾಗೂ 130 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.