ಮಹಾತ್ಮರಿಂದ ಸಮಾಜಕ್ಕೆ ಉತ್ತಮ ಕೊಡುಗೆ

ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ರುದ್ರಮುನಿ ಶಿವಯೋಗಿಗಳ ಸ್ಮರಣೆ ಮತ್ತು ಮುರುಘೇಂದ್ರ ಶ್ರೀಗಳ ಪ್ರಥಮ ಪುಣ್ಯರಾಧನೆÀ ಸಾನ್ನಿಧ್ಯ ವಹಿಸಿ ಶಿವಪ್ರಕಾಶ್ ಶಿವಾಚಾರ್ಯ ಶ್ರೀಗಳು ಮತನಾಡಿದರು. ಆಸಂಗಿ ಮಠದ ಬಸವ ಶ್ರೀಗಳು, ಜಗದೀಶ ಕೊಟ್ರಶೆಟ್ಟಿ, ನೀಲು ನಾಯಕ, ಜಗದೇವಿ ಗುಂಡಳ್ಳಿ, ಬಸವರಾಜ ಗೊಳಸಂಗಿ, ಚಂದ್ರಶೇಖರ ಪಾಟೀಲ ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ರುದ್ರಮುನಿ ಶಿವಯೋಗಿಗಳ ಸ್ಮರಣೆ ಮತ್ತು ಮುರುಘೇಂದ್ರ ಶ್ರೀಗಳ ಪ್ರಥಮ ಪುಣ್ಯರಾಧನೆÀ ಸಾನ್ನಿಧ್ಯ ವಹಿಸಿ ಶಿವಪ್ರಕಾಶ್ ಶಿವಾಚಾರ್ಯ ಶ್ರೀಗಳು ಮತನಾಡಿದರು. ಆಸಂಗಿ ಮಠದ ಬಸವ ಶ್ರೀಗಳು, ಜಗದೀಶ ಕೊಟ್ರಶೆಟ್ಟಿ, ನೀಲು ನಾಯಕ, ಜಗದೇವಿ ಗುಂಡಳ್ಳಿ, ಬಸವರಾಜ ಗೊಳಸಂಗಿ, ಚಂದ್ರಶೇಖರ ಪಾಟೀಲ ಮತ್ತಿತರರಿದ್ದರು.
Published on
ಬಸವನಬಾಗೇವಾಡಿ: ಸಮಾಜಕ್ಕೆ ಯಾರು ತಮ್ಮದೆಯಾದ ಕೊಡುಗೆ ನೀಡಿ, ಹೆಸರು ಪಡೆದಿರುತ್ತಾರೋ ಅಂತವರು ಮಹಾತ್ಮರಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರ ಶ್ರೀಗಳು ತಿಳಿಸಿದರು.
ಪಟ್ಟಣದ ವಿರಕ್ತಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಗುರುವಾರ ಶ್ರೀ ರುದ್ರಮುನಿ ಶಿವಯೋಗಿಗಳ ಸ್ಮರಣೆ ಮತ್ತು ಪೂಜ್ಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ಪ್ರಥಮ ಪುಣ್ಯರಾಧನೆ ಹಾಗೂ ಧರ್ಮ ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಿತ್ಯ ನಿರಂತರವಾಗಿ ಸಮಾಜಕ್ಕೆ ಮತ್ತು ಭಕ್ತರಿಗೆ ಉತ್ತಮ ಸಂಸ್ಕಾರ, ಧಾರ್ಮಿಕ ಭಕ್ತಿ, ಭಾವನೆ ನೀಡುವ ಕೆಲಸ ಕಾರ್ಯವನ್ನು ಯಶಸ್ವಿಗೊಳಿಸಿ, ಸಮಾಜದಲ್ಲಿ ಬದಲಾವಣೆ ತರುವಂತಹ ಮಹಾತ್ಮರು ಯಾವಾಗಲೂ ಜನರ ಮನಸ್ಸಿನಲ್ಲಿ ಉಳಿಯುತ್ತಾರೋ, ಅಂತ ಕಾರ್ಯವನ್ನು ಅಪ್ಪ ಮುರುಘೇಂದ್ರ ಶ್ರೀಗಳು ಮಾಡಿz್ದÁರೆ ಎಂದು ಹೇಳಿದರು.
ಶ್ರೀಗಳು ಅಲ್ಲಮಪ್ರಭುಗಳ ಬೆಡಗಿನ ವಚನ ಹಾಗೂ ಬಸವ ಪುರಾಣ ಜನ ಸಾಮಾನ್ಯರಿಗೆ ಅರ್ಥೈಸುತ್ತಿದ್ದರು. ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲ ಭಕ್ತರನ್ನು ಸಮನಾಗಿ ನೋಡಿ, ಸದಾ ಭಕ್ತರ ಯೋಗಕ್ಷೇಮ ಅರಿತು, e್ಞÁನದ ಅರಿವು ಮೂಡಿಸುತ್ತಿದ್ದರು ಎಂದರು.
ಮನಕವಾಡ ದೇವರ ಗದ್ದುಗೆ ಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಮಾತನಾಡಿ, ಮನುಷ್ಯನ ಬದುಕಿನ ಬವಣೆಯನ್ನು ದೂರ ಮಾಡುವ ಶಕ್ತಿ ಗುರುವಿಗೆ ಮಾತ್ರ ಸಾಧ್ಯ. ನಮ್ಮ ಗುರಿ ತಲುಪಲು ಗುರುವಿನ ಕೃಪೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿ, ಮುರುಘೇಂದ್ರ ಶ್ರೀಗಳಿಗೆ ಅಪ್ಪ ಬಸವಣ್ಣನವರ ಕೃಪಾ ಆಶೀರ್ವಾದದಿಂದ ತತ್ವ ಸಿದ್ಧಾಂತ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಹೀಗಾಗಿ ತಮ್ಮ ಇಡೀ ಜೀವನ ಉದ್ದಕ್ಕೂ ಎಂದೂ ಜÁತಿ, ಧರ್ಮ, ಭೇದ, ಭಾವ ಇಲ್ಲದೆ ಎಲ್ಲರನ್ನು ಸಮನಾಗಿ ಕಂಡಿದ್ದರು ಎಂದು ಹೇಳಿದರು.
ವಿರಕ್ತಮಠ ಸಿದ್ಧಲಿಂಗ ಶ್ರೀಗಳು ಮಾತನಾಡಿ, ರುದ್ರಮುನಿ ಶಿವಯೋಗಿಗಳು ತ್ರಿಕಾಲ e್ಞÁನಿಗಳಾಗಿದ್ದರು. ತಮ್ಮ ದಿವ್ಯ e್ಞÁನದಿಂದ ಭಕ್ತರಿಗೆ ಮುಂದಾಗುವ ಸೂಚನೆ ನೀಡುತ್ತಿದ್ದರು. ಶ್ರೀ ಮಠಕ್ಕೆ ಪೀಠಾಽಪತಿಯಾದ ಶಿವಲಿಂಗೇಶ್ವರ ಶ್ರೀಗಳು ಮತ್ತು ಮುರುಘೇಂದ್ರ ಶ್ರೀಗಳು ಅಪಾರ e್ಞÁನಿಯಾಗಿದ್ದರು ಎಂದರು.
ಆಸAಗಿ ಮಠದ ಬಸವ ಶ್ರೀಗಳು, ಜಗದೀಶ ಕೊಟ್ರಶೆಟ್ಟಿ, ನೀಲು ನಾಯಕ, ಜಗದೇವಿ ಗುಂಡಳ್ಳಿ, ಬಸವರಾಜ ಗೊಳಸಂಗಿ, ಚಂದ್ರಶೇಖರ ಪಾಟೀಲ, ಪಂಚಾಕ್ಷರಯ್ಯ ಕಾಳಹಸ್ತೇಶ್ವರಮಠ, ಶೇಖರ ಗೊಳಸಂಗಿ, ಯಮನೂರಿ ಬಿದರಕುಂದಿ, ಎಸ್.ಎಸ್. ಝಳಕಿ, ರವಿ ಪಟ್ಟಣಶೆಟ್ಟಿ, ಮಹಾಂತೇಶ ಹಡಪದ, ರುದ್ರಮುನಿ ಸಾರಂಗಮಠ, ಸಿದ್ಧಣ್ಣ ಕಲ್ಲೂರ ಸೇರಿ ಅನೇಕರು ಉಪಸ್ಥಿತರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net