ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶಾಸಕರು, ತೊರವಿ ಗ್ರಾಮದ ಅತಾಲಟ್ಟಿ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಹತ್ತಿರ, ಎಸ್‌ಸಿ ಕಾಲನಿಯ ಹನುಮಾನ ದೇವಸ್ಥಾನ ಹತ್ತಿರ, ಇಂದಿರಾ ನಗರದ ಝೆಂಡಾ ಕಟ್ಟಿ ಹತ್ತಿರ, ಪರಿಶಿಷ್ಟ ಜಾತಿಯ ಸ್ಮಶಾನದಲ್ಲಿ, ಹರಳಯ್ಯ ಸಮಾಜದ ಮರಗಮ್ಮ ದೇವಸ್ಥಾನದ ಹತ್ತಿರ, ಹರಳಯ್ಯ ಸಮಾಜದ ಸಾರ್ವಜನಿಕ ಜಾಗೆಯಲ್ಲಿ, ತೊರವಿ ಮುಖ್ಯ ರಸ್ತೆಯ ತಾಂಡಾ ನಂ. 1 ರ ಕ್ರಾಸ್ ಹತ್ತಿರ, ತಾಂಡಾ ನಂ. 1ರ ಸ್ಮಶಾನದಲ್ಲಿ, ಗೋವಿಂದ ಹುಬ್ಬು ಜಾಧವ ಅವರ ಮನೆ ಹತ್ತಿರದ ಸಾರ್ವಜನಿಕ ಜಾಗೆಯಲ್ಲಿ ಹೈಮಾ¸್ಟï ದೀಪ ಅಳವಡಿಕೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ.