ಧಮ್ಮ ಜನ ಜಾಗೃತಿ ಯಾತ್ರೆ ಹಿನ್ನೆಲೆ, ಬುದ್ಧ ವಿಹಾರದಲ್ಲಿ ಭವ್ಯ ಕಾರ್ಯಕ್ರಮ

ರಾಜಶೇಖರ ಯಡಹಳ್ಳಿ ಹೇಳಿಕೆ * ಕಾರ್ಯಕ್ರಮದ ರೂಪುರೇಷ ಬಹಿರಂಗ
ವಿಜಯಪುರ ನಗರದಲ್ಲಿ ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಶಶಿಕಾಂತ ಹೊನವಾಡಕರ, ಸಾಬು ಚಲವಾದಿ, ನಾಗರಾಜ ಲಂಬು ಇದ್ದಾರೆ.
ವಿಜಯಪುರ ನಗರದಲ್ಲಿ ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಶಶಿಕಾಂತ ಹೊನವಾಡಕರ, ಸಾಬು ಚಲವಾದಿ, ನಾಗರಾಜ ಲಂಬು ಇದ್ದಾರೆ.
Published on: 

ವಿಜಯಪುರ: ‘ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಅ. 22 ರಂದು ಸಂಜೆ 5ಕ್ಕೆ ಕರ್ನಾಟಕ ಧಮ್ಮ ಜನ ಜಾಗೃತಿ ಯಾತ್ರೆ ನಡೆಯಲಿದೆ’ ಎಂದು ಬೌದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಹೇಳಿದರು.

ಇಲ್ಲಿನ ಜಲ ನಗರದಲ್ಲಿರುವ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ಭಂತೆ ಡಾ. ಶಾಕು ಬೋಧಿಧಮ್ಮ ಅವರ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮತ್ತು ಜಿಲ್ಲೆಯ ಎಲ್ಲ ಉಪಾಸಕರು ಭಾಗವಹಿಸಲಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘1956 ಅ.14 ರಂದು ನಾಗಪುರದ ಪವಿತ್ರ ದೀಕ್ಷಾಭೂಮಿಯಲ್ಲಿ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಪುನರುಜ್ಜೀವನಗೊಳಿಸಿ ಪ್ರಬುದ್ಧ ಭಾರತದ ಮಹಾನ್ ಸಂಕಲ್ಪವನ್ನು ಸಾಕಾರಗೊಳಿಸಿದ ನೆನಪಿಗಾಗಿ ಕರ್ನಾಟಕದಾದ್ಯಂತ ಧಮ್ಮ ಜನಜಾಗೃತಿ ಯಾತ್ರೆಯನ್ನು ಆಯೋಜಿಸಲಾಗಿದೆ. ಕಾರಣ ಸಮಸ್ತ ಜಿಲ್ಲೆಯ ಬೌದ್ಧ ಅನುಯಾಯಿಗಳು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಕೋರಿದರು.

ಅಮೇರಿಕಾದ ಭಂತೆ ಭೋದಿ ಚಿತ್ತ ಅವರು ಮಾತನಾಡಿ, ‘ಸಾಮ್ರಾಟ ಅಶೋಕ ಅವರು ಪ್ರಾರಂಭ ಮಾಡಿದ ವಿಜಯದಶಮಿಯನ್ನು ನಾವು ಆಚರಣೆ ಮಾಡುತ್ತ ಬಂದಿದ್ದೇವೆ, ಸಾಮ್ರಾಟ ಅಶೋಕ ಮತ್ತು ಬಾಬಾ ಸಾಹೇಬ್ ಅವರ ತತ್ವ ಚಿಂತನೆ ಮತ್ತು ಇಂದಿನ ಜನಾಂಗಕ್ಕೆ ಮಾದರಿ’ ಎಂದರು.

ಬುದ್ಧ ವಿಹಾರ ನಿರ್ಮಾಣ ಸಮಿತಿಯ ಶಶಿಕಾಂತ ಹೊನವಾಡಕರ, ಸಾಬು ಚಲವಾದಿ, ನಾಗರಾಜ ಲಂಬು, ರಾಜು ತೊರವಿ, ಸುರೇಶ ಘೊಣಸಗಿ, ಪ್ರದೀಪ ಖ್ಯಾತನ, ಸಂಜೋತ ಔದಿ, ಅನಿಲ ಹೊಸಮನಿ, ಚನ್ನು ಕಟ್ಟಿಮನಿ, ಮಲ್ಲು ಜಾಲಗೇರಿ ಇತರರದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net