ಬಿಜೆಪಿ ಸೇರಲು ಯತ್ನಾಳರಿಗೆ ಒಳ್ಳೆಯ ಚಾನ್ಸ್..!

ಬಿಜೆಪಿ
ಬಿಜೆಪಿ
Published on
ವಿಜಯಪುರ: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮರಳಿ ಬಿಜೆಪಿಗೆ ಸೇರ್ಪಡೆಯಾಗಲು ಉಪ ಚುನಾವಣೆ ಒಳ್ಳೆಯ ಅವಕಾಶ ಎಂದಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಎಂ.ಬಿ. ಪಾಟೀಲರು, ಬಿಜೆಪಿಯನ್ನು ಸೋಲಿಸುವ ಮೂಲಕ ರಾಜ್ಯಾಧ್ಯಕ್ಷ ವಿಜಯೇಂದ್ರನನ್ನು ಕೆಳಗಿಳಿಸುವ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪ ಚುನಾವಣೆ ವಿಜಯೇಂದ್ರ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ.
ಸದ್ಯ ಬಿಜೆಪಿ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಉಪ ಚುನಾವಣೆ ಎದುರಿಸುತ್ತಿದೆ.
ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಸೋತರೆ ವಿಜಯೇಂದ್ರ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಅಪ್ಪ-ಮಕ್ಕಳ ವಿರುದ್ಧ ಸದಾ ಕಿಡಿ ಕಾರುವ ಯತ್ನಾಳರಿಗೆ ಇದೊಂದು ಒಳ್ಳೆಯ ಅವಕಾಶ. ಬಿಜೆಪಿಯನ್ನು ಸೋಲಿಸಿ ವಿಜಯೇಂದ್ರ ಅವರನ್ನು ಕೆಳಗಿಳಿಸುವ ತಮ್ಮ ಕನಸು ನನಸು ಮಾಡಿಕೊಳ್ಳಬೇಕೆಂದು ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ವಿಜಯೇಂದ್ರ ಅವರ ಬಲ ಹೆಚ್ಚಲಿದೆ. ಬಿಜೆಪಿ ಸೋತರೆ ವಿಜಯೇಂದ್ರ ಬಲ ಕುಸಿಯಲಿದೆ. ಹೀಗಾಗಿ ವಿಜಯೇಂದ್ರ ತೆಗೆಯಲು ಯತ್ನಾಳಗೆ ಒಳ್ಳೆಯ ಅವಕಾಶ. ವಿಜಯೇಂದ್ರ ಉಳಿಯಬೇಕಿದ್ದರೆ ಯತ್ನಾಳ ಕಾಂಗ್ರೆಸ್ ಗೆಲ್ಲಿಸಲಿ ಎಂದ ಸಚಿವ ಎಂ.ಬಿ. ಪಾಟೀಲರು, ಯತ್ನಾಳರು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಲಿ ಎಂದು ಕೈಯೊಡ್ಡುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಅವರಿಗೆ ಸ್ವಾಭಿಮಾನ, ಮಾನ-ಮರ್ಯಾದೆ ಇದ್ದರೆ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ತೋರಿಸಲಿ. ವಿಜಯೇಂದ್ರ ಅವರನ್ನು ಉಳಿಸುವ ಕೆಲಸ ಮಾಡುತ್ತಿದ್ದರೆ ಮಾಡಲಿ. ನಾವಂತೂ ಎರಡೂ ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ ಎಂದರು.
ಉಮೇಶ ಮೇಟಿ ಅವರಿಗೆ ಬೇರೆ ಬೇರೆ ಸಮುದಾಯಗಳ ಬೆಂಬಲ ಸಿಕ್ಕಿದೆ. ನಿಶ್ಚಿತವಾಗಿ ಗೆಲುವು ಸಾಽಸುತ್ತಾರೆಂದು ಎಂ.ಬಿ. ಪಾಟೀಲ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net