ಇಂಡಿ ನಗರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಕೆವಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ‘ವೈಜ್ಞಾನಿಕ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ’ ಕಾರ್ಯಕ್ರಮವನ್ನು ಡಾ. ರಾಜಕುಮಾರ ಜೊಳ್ಳಿ ಉದ್ಘಾಟಿಸಿದರು. ಡಾ. ಶಿವಶಂಕರಮೂರ್ತಿ ಎಂ., ಡಾ. ಪ್ರಸಾದ ಎಂ.ಜಿ., ಡಾ. ವೀಣಾ, ಡಾ. ಹೀನಾ, ರೈತರು ಇತರರಿದ್ದರು.
ಇಂಡಿ: ಭಾರತದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಲಾಭದಾಯಕ ಉದ್ಯಮ, ಕುರಿ ಮತ್ತು ಮೇಕೆ ಸಾಕಾಣಿಕೆ ಮೂಲ ಜ್ಞಾನ ಮತ್ತು ಕಾರ್ಯಾಚರಣೆ ಅಗತ್ಯ ಎಂದು ಕೃಷಿ ವಿಜ್ಞಾನ ಕೇಂದ್ರ ವಿಜಯಪುರ ಸಹ ವಿಸ್ತರಣಾ ನಿರ್ದೇಶಕ ಡಾ. ರಾಜಕುಮಾರ ಜೊಳ್ಳಿ ಹೇಳಿದರು.
ನಗರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕೆವಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ‘ವೈಜ್ಞಾನಿಕ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ’ ಕಾರ್ಯಕ್ರಮ ಕುರಿತು ಅವರು ಮಾತನಾಡಿದರು.
ಕುರಿ ಮತ್ತು ಮೇಕೆಗಳಿಗೆ ಸೂಕ್ತ ಆಹಾರ ಕಾರ್ಯವಿಧಾನ, ಮೇವು ಸಂರಕ್ಷಣೆ ಮತ್ತು ಸರಿಯಾದ ಆಹಾರ ನೀಡುವಿಕೆ, ಅವುಗಳಿಗೆ ಬರುವ ಪ್ರಮುಖ ರೋಗದ ನಿಯಂತ್ರಣ, ನಿರ್ವಹಣೆ, ಲಾಭದಾಯಕ ಮೇಕೆ ಸಾಕಾಣಿಕೆಗಾಗಿ ಕುರಿ-ಮೇಕೆಗಳ ಆಯ್ಕೆ ಮತ್ತು ಆರ್ಥಿಕ ಅಧ್ಯಯನ ಕುರಿತು ಮಾಹಿತಿ ತಿಳಿಸಿದರು.
ಇಂಡಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ತರಬೇತಿ ರೈತರಿಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಹೆಚ್ಚು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಇಂಡಿ ಪಶು ವಿಜ್ಞಾನ ತಜ್ಞರು ಡಾ. ಪ್ರಸಾದ ಎಂ.ಜಿ., ಡಾ. ವೀಣಾ, ಡಾ. ಹೀನಾ, ರೈತರು ಇತರರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 60ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.