ಆಲದಮರಕ್ಕೆ ಕಾರು ಡಿಕ್ಕಿ ಹೊಡೆದು ಜಿಎಚ್‌ಒ ಸಾವು

ನಿಯಂತ್ರಣ ತಪ್ಪಿ ಆಲದಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುವುದು.
ನಿಯಂತ್ರಣ ತಪ್ಪಿ ಆಲದಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುವುದು.
Published on
ವಿಜಯವಾಣಿ ಸುದ್ದಿಜಾಲ, ತಾಳಿಕೋಟೆ
ಚಾಲಕನ ನಿಯಂತ್ರಣ ತಪ್ಪಿ ಕಾರು ಆಲದಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ಬಾಗಲಕೋಟೆ ಪೊಲೀಸ್ ಇಲಾಖೆಯಲ್ಲಿ ಜಿಎಚ್‌ಒ (ಜನರಲ್ ಹೆಡ್ ಕಾನ್ಸ್ಟೆಬಲ್) ಆಗಿ ಸೇವೆ ಸಲ್ಲಿಸುತ್ತಿರುವ ನಿಸಾರಹ್ಮದ್ ಅಬ್ದುಲ್‌ರಜಾಕ ಹಿಪ್ಪರಗಿ (೫೦) ಎಂಬುವವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಪಟ್ಟಣದ ಸಮೀಪ ಸೋಮವಾರ ನಸುಕಿನ ೨ ಗಂಟೆ ಸುಮಾರಿಗೆ ನಡೆದಿದೆ.
ಕಾರಿನಲ್ಲಿದ್ದ ಮೃತನ ಮಗಳಾದ ನೇಹಾ (೨೨) ಮತ್ತು ಸ್ನೇಹಿತ ಎಎಸ್‌ಐ ಬಸವರಾಜ ಸೋನಾ (೫೧) ಅವರಿಗೆ ಗಂಭೀರ ಗಾಯಗಳಾಗಿದ್ದು ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ : ನಿಸಾರಹ್ಮದ್ ಅವರು ತಮ್ಮ ಮಗಳು ನೇಹಾಳನ್ನು ಹೈದ್ರಾಬಾದ್‌ನಲ್ಲಿ ಐಪಿಎಸ್ ಕೋಚಿಂಗ್ ಕ್ಲಾಸ್‌ಗೆ ಸೇರಿಸಿದ್ದು, ಪರೀಕ್ಷೆಗಳು ಮುಗಿದಿದ್ದರಿಂದ ತಮ್ಮ ಮಗಳನ್ನು ಕರೆದುಕೊಂಡು ಸ್ನೇಹಿತ ಬಸವರಾಜ ಸೋನಾ ಎಂಬುವವರೊಡನೆ ಕಾರಿನಲ್ಲಿ ಊರಿಗೆ ಹಿಂದಿರುಗಿ ಬರುತ್ತಿದ್ದಾಗ ರಸ್ತೆ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಬಲಗಡೆ ಇದ್ದ ಆಲದಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ನಿಸಾರಹ್ಮದ್ ಮೃತಪಟ್ಟಿದ್ದು, ನೇಹಾ ಹಾಗೂ ಬಸವರಾಜ ಅವರಿಗೆ ಗಂಭೀರ ಗಾಯಗಳಾಗಿದೆ.
ನಿಸಾರಹ್ಮದ್ ಅವರ ಅಳಿಯ ಅಜೀಜ ಅಹ್ಮದ ಕುಡಚಿ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ, ಸಿಪಿಐ ಮಹ್ಮದ ಪಸೀಉದ್ದೀನ, ಪಿಎಸ್‌ಐ ಜ್ಯೋತಿ ಖೋತ್, ಅಪರಾಧ ವಿಭಾಗದ ಪಿಎಸ್‌ಐ ಎಸ್.ಎಂ. ಪಡಶೆಟ್ಟಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net