ನೀರಾವರಿ ವಿಷಯದಲ್ಲಿ ಚರ್ಚೆಗೆ ಸಿದ್ಧ, ಬಿಜೆಪಿ ನಾಯಕರ ಸವಾಲು ಸ್ವೀಕರಿಸಿದ ಗಣಿಹಾರ

ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ರವಿ ಬಿರಾದಾರ, ವಸಂತ ಹೊನಮೋಡೆ ಇದ್ದಾರೆ.
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ರವಿ ಬಿರಾದಾರ, ವಸಂತ ಹೊನಮೋಡೆ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ನಾಯಕರ ಸವಾಲು ಸ್ವೀಕಾರ
  • ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ರೆಡಿ
  • ಎಸ್.ಎಂ. ಪಾಟೀಲ ಗಣಿಹಾರ ಪ್ರತಿಕ್ರಿಯೆ
ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಕುರಿತು ಟೀಕೆ ಮಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಅವರು, ನೀರಾವರಿ ವಿಷಯದಲ್ಲಿ ಬಹಿರಂಗ ಚರ್ಚೆಯ ಆಹ್ವಾನ ಸ್ವೀಕರಿಸಿದ್ದಾಗಿ ಪ್ರತಿಕ್ರಿಯಿಸಿದರು.
ರಾಜ್ಯದಲ್ಲೇ ಅತೀ ಹೆಚ್ಚು ನೀರಾವರಿ ಕಾಮಗಾರಿ ಆಗಿರುವುದು ವಿಜಯಪುರ ಜಿಲ್ಲೆಯಲ್ಲಿ. 2013-18 ರ ಸಿದ್ದರಾಮಯ್ಯ ಸರ್ಕಾರದ ಅವಧಿ ನೀರಾವರಿ ಪಾಲಿನ ಸುವರ್ಣಯುಗ. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ನುಡಿದಂತೆ 50 ಸಾವಿರ ಕೋಟಿ ರೂ. ಗಳಿಗೂ ಅಧಿಕ ಖರ್ಚು ಮಾಡಲಾಗಿದೆ. ಈ ಕುರಿತು ಚರ್ಚೆಗೆ ಸಿದ್ಧ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಎಂ.ಬಿ. ಪಾಟೀಲರ ನೀರಾವರಿ ಸಾಧನೆ ಮೆಚ್ಚಿಯೇ ಈ ಹಿಂದೆ ಬಿಜೆಪಿಯಲ್ಲಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಗೀರಥ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕೆ.ಎಸ್. ಈಶ್ವರಪ್ಪ ಕೂಡ ನೀರಾವರಿ ಯೋಜನೆ ಕೈಗೊಂಡಿರಬಹುದು. ಆದರೆ ಕೆರೆಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಂಡಿರುವುದೇ ಎಂ.ಬಿ. ಪಾಟೀಲರು ಎಂದರು.
ಬೇಕಾದರೆ ಬಿಜೆಪಿಯವರೇ ಯಾವುದಾದರೂ ಒಂದು ಹೋಬಳಿ ಆಯ್ಕೆ ಮಾಡಿಕೊಳ್ಳಲಿ. ಅಲ್ಲಿ ಕಾಲುವೆ ಇಲ್ಲದಿದ್ದರೆ ಬಿಜೆಪಿಗರು ಹೇಳಿದ ಹಾಗೆ ಕೇಳುವೆ. ಏಷ್ಯಾದಲ್ಲೇ ಅತೀ ದೊಡ್ಡ ಅಕ್ವಾಡೆಕ್ಟ್ ಮಾಡಲಾಗಿದೆ. ಕಾಲುವೆ ಜಾಲ, ಏತ ನೀರಾವರಿ ಹೀಗೆ ಅನೇಕ ನೀರಾವರಿ ಯೋಜನೆ ಕೈಗೊಂಡಿದ್ದು ವಿರೋಧಿಗಳು ಸಹ ಮೆಚ್ಚಿಕೊಂಡಿದ್ದಾರೆಂದು ಹೇಳಿದರು.
ಇನ್ನು ಶಾಸಕ ಯಶವಂತರಾಯಗೌಡ ಪಾಟೀಲರ ಅವಧಿಯಲ್ಲಿ ಇಂಡಿ ವಿಧಾನ ಸಭೆ ಕ್ಷೇತ್ರ ಇಂದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಒಂದೇ ಒಂದು ಕೋಮು ಗಲಭೆಯಾಗಿಲ್ಲ. ನೆನೆಗುದಿಗೆ ಬಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅವರು ಮೋದಿ ಅನುಯಾಯಿಗಳನ್ನು ಅಂಧಭಕ್ತರು ಎಂದಿದ್ದು ಕೇವಲ ಅವರ ಹೇಳಿಕೆಯಲ್ಲ. ದೇಶದ ಜನರೇ ಈಗ ಅಂಧಭಕ್ತರೆಂಬ ಪದ ಬಳಸುತ್ತಿದ್ದಾರೆಂದು ಎಂದರು.
ಅಷ್ಟಕ್ಕೂ ಬಿಜೆಪಿ ಅನುಯಾಯಿಗಳು ಅಂಧಭಕ್ತರು ಎಂಬುದರಲ್ಲಿ ಎರಡು ಮಾತಿಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದರೂ, ಗ್ಯಾಸ್, ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಾದರೂ, ಚಿನ್ನದ ದರ ಏರಿಕೆಯಾದರೂ ಮೋದಿಯನ್ನು ಸಮರ್ಥಿಸಿಕೊಳ್ಳುವುದನ್ನು ಗಮನಿಸಿದಾಗ ಇದು ಅಂಧಭಕ್ತಿ ಎನ್ನಿಸುವುದಿಲ್ಲವೇ ಎಂದರು.
ಮುಖಂಡ ರವಿ ಬಿರಾದಾರ ಮಾತನಾಡಿ, ಬಿಜೆಪಿಯಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಸಿಗುವುದೇ ದೊಡ್ಡ ಸುಳ್ಳು ಹೇಳುವವರು, ದೊಡ್ಡ ನಾಟಕಕಾರರಿಗೆ. ಹೀಗಾಗಿ ಬಿಜೆಪಿಗರು ತಮ್ಮ ನಾಯಕರನ್ನು ಮೆಚ್ಚಿಸಲು ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಆ ಸುಳ್ಳುಗಾರಿಕೆಯ ಸ್ಥಾನ ಆಧರಿಸಿ ಬಿಜೆಪಿಯಲ್ಲಿ ಹುದ್ದೆಗಳು ನಿರ್ಧಾರವಾಗುತ್ತವೆ ಎಂದರು.
ಈ ಹಿಂದೆ ಸರ್ವಾಂಗ ತೊಳೆದುಕೊಳ್ಳಲು ನೀರಿರಲಿಲ್ಲ. ಇದೀಗ ಇಡೀ ಜಿಲ್ಲೆ ಸಮಗ್ರ ನೀರಾವರಿಯಾಗಿದೆ. ಒಂದ್ಸಲ ನೀರಾವರಿ ಕಣ್ತುಂಬಿಕೊಳ್ಳಿ ಎಂದರು.
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ರವಿ ಬಿರಾದಾರ, ವಸಂತ ಹೊನಮೋಡೆ ಇದ್ದಾರೆ.
ಕರೊನಾ ಸಂದರ್ಭದಲ್ಲಿ ಕೋಟಿಗಟ್ಟಲೆ ಜನ ಸತ್ತರೂ ಗಂಟೆ ಬಾರಿಸಿ ಎಂದ ಕೂಡಲೇ ಗಂಟೆ ಬಾರಿಸಿದರು. ಚಪ್ಪಾಳೆ ತಟ್ಟಿ ಎಂದರೆ ಚಪ್ಪಾಳೆ ತಟ್ಟಿದರು. ಇದು ಅಂಧಭಕ್ತಿ ಅಲ್ಲವೇ? ರಫೆಲ್ ಯುದ್ಧ ವಿಮಾನದ ದಾಖಲೆ ಕಳುವಾದರೂ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದರೂ ಮೋದಿಯನ್ನು ಚೌಕಿದಾರ್ ಎನ್ನುವುದು ಅಂಧಭಕ್ತಿ ಅಲ್ಲವೇ ಎಂದರು.
ಮುಖಂಡ ವಸಂತ ಹೊನಮೋಡೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net