ಜಂತರ್ ಮಂತರ್‌ನಲ್ಲಿನ ಹೋರಾಟಕ್ಕೆ ಸಂಪೂರ್ಣ ಬೆಂಬಲ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಕರವೇ ಸ್ವಾಭಿಮಾನಿ ಸೇನಾ ಸಮಿತಿಯಿಂದ ವಿಜಯಪುರದಲ್ಲಿ ಅಪರ್ ಜಿ¯್ಲÁಽಕಾರಿ ಡಾ. ಔದ್ರಾಮ ಅವರಿಗೆ ಸಲ್ಲಿಸಲಾಯಿತು. ಜಗದೇವ ಸೂರ್ಯವಂಶಿ, ಎಂ.ಆರ್. ಗುರಿಕಾರ, ಸುಶೀಲಾ ಮಿಣಜಗಿ ಮತ್ತಿತರರಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಕರವೇ ಸ್ವಾಭಿಮಾನಿ ಸೇನಾ ಸಮಿತಿಯಿಂದ ವಿಜಯಪುರದಲ್ಲಿ ಅಪರ್ ಜಿ¯್ಲÁಽಕಾರಿ ಡಾ. ಔದ್ರಾಮ ಅವರಿಗೆ ಸಲ್ಲಿಸಲಾಯಿತು. ಜಗದೇವ ಸೂರ್ಯವಂಶಿ, ಎಂ.ಆರ್. ಗುರಿಕಾರ, ಸುಶೀಲಾ ಮಿಣಜಗಿ ಮತ್ತಿತರರಿದ್ದಾರೆ.
Published on
ವಿಜಯಪುರ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನಾ ಸಮಿತಿ ವತಿಯಿಂದ ರಾಷ್ಟçಪತಿಗಳಿಗೆ ಬರೆದ ಲಿಖಿತ ಮನವಿ ಪತ್ರವನ್ನು ಶುಕ್ರವಾರ ಅಪರ ಜಿ¯್ಲÁಽಕಾರಿ ಡಾ. ಔದ್ರಾಮ ಅವರಿಗೆ ಸಲ್ಲಿಸಲಾಯಿತು.
ಸಂಘಟನೆ ಅಧ್ಯಕ್ಷ ಜಗದೇವ ಸೂರ್ಯವಂಶಿ ಮಾತನಾಡಿ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಹಲವು ದಿನಗಳಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ನಮ್ಮ ಸಂಘಟನೆಯು ಸಹ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.
ಕೇAದ್ರ ಸರ್ಕಾರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ತನಿಖೆ ನಡೆಸಬೇಕು. ಶಿಕ್ಷಣ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ನಂಬಿಕೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಬೇಕು. ನೀಟ್ ಅಕ್ರಮದಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಮತ್ತು ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಽಸಬೇಕೆಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಈಶ್ವರ ಚಂದ್ರ ಪಡಗಣ್ಣವರ, ಪದಾಽಕಾರಿಗಳಾದ ಎಂ.ಆರ್. ಗುರಿಕಾರ, ಶಂಕರ ಸಾತಪೋತೆ, ಶರಣಪ್ಪ ಕಟ್ಟಿ, ಪರಶುರಾಮ ತೊರವಿ, ಸುರೇಶ ನಿನ್ನೆ, ನೀಲಂಬಿಕಾ ಬಿರಾದಾರ, ಸುಶೀಲಾ ಮಿಣಜಗಿ, ಜ್ಯೋತಿ ಮಿಣಜಗಿ ಮತ್ತಿತರರಿದ್ದರು.
**
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net