ಬಿಸಿಯೂಟ ಕಾರ್ಮಿಕರ ಬೇಡಿಕೆ ಈಡೇರಿಸಿ

ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಗಂಗೂಬಾಯಿ ಉಳ್ಳಾಗಡ್ಡಿ, ರೂಪಾ ಬಿಸ್ಟ್ಗೂಂಡ, ಜಯಶ್ರೀ ಬಂಡಿವಡ್ಡರ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಗಂಗೂಬಾಯಿ ಉಳ್ಳಾಗಡ್ಡಿ, ರೂಪಾ ಬಿಸ್ಟ್ಗೂಂಡ, ಜಯಶ್ರೀ ಬಂಡಿವಡ್ಡರ ಇತರರಿದ್ದಾರೆ.
Published on
ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದೇಶದ ಕೋಟ್ಯಂತರ ಶಾಲಾ ಮಕ್ಕಳ ಹಸಿವು ನೀಗಿಸಿ, ಅಪೌಷ್ಟಿಕತೆ ನಿರ್ಮೂಲನೆ ಮಾಡುವಲ್ಲಿ ಬಿಸಿಯೂಟ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಬಿಸಿಯೂಟ ಯೋಜನೆಯ ಬೆನ್ನೆಲು ಬಾಗಿರುವ ಲಕ್ಷಾಂತರ ಕಾರ್ಮಿಕರು ಅತ್ಯಂತ ಕನಿಷ್ಠ ಗೌರವ ಧನದಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬೆಲೆ ಏರಿಕೆಯ ಈ ಕಾಲದಲ್ಲಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಆದರೆ, ಸಂಸತ್ ಸದಸ್ಯರು ಸತತ ನಾಲ್ದುಕೈ ಬಾರಿ ತಮ್ಮ ಸಂಬಳ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸ್ವಾರ್ಥವನ್ನು ಬಿಟ್ಟು ದೇಶದ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಸಂಘದ ಪ್ರಮುಖರಾದ ಗಂಗೂಬಾಯಿ ಉಳ್ಳಾಗಡ್ಡಿ, ರೂಪಾ ಬಿಸ್ಟ್ಗೂಂಡ, ಜಯಶ್ರೀ ಬಂಡಿವಡ್ಡರ, ಮಂಜುಳಾ ತಳವಾರ, ಶ್ರೀದೇವಿ ಸೌದಾಗರ, ಸಲ್ಮಾ ಹಡಗಲಿ, ಹಡೆಮ್ಮ ಅಸ್ಕಿ, ಎಸ್.ಕೆ. ಚಲವಾದಿ, ಇಂದ್ರಾಬಾಯಿ ತಳವಾರ, ಮಹಾದೇವಿ ದೊಡಮನಿ, ಭಾರತಿ ಚಲವಾದಿ ಮತ್ತಿತರರಿದ್ದರು.
ಪ್ರಮುಖ ಬೇಡಿಕೆಗಳು
1. ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
2. ಸದ್ಯಕ್ಕೆ ಕನಿಷ್ಠ ವೇತನ ಮತ್ತು ಇತರ ಶಾಸನಬದ್ಧ ಸೌಲಭ್ಯ ಒದಗಿಸಬೇಕು.
3. ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಅನುದಾನ ಹೆಚ್ಚಿಸಬೇಕು.
4. ಕಾರ್ಮಿಕರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸಬೇಕು.
5. ಬೆಲೆ ಏರಿಕೆಗೆ ಅನುಗುಣವಾಗಿ ಕಾಲ ಕಾಲಕ್ಕೆ ಗೌರವ ಧನ ಪರಿಷ್ಕರಿಸಬೇಕು
6. ನಿವೃತ್ತಿ ವೇತನ, ಇಎಸ್‌ಐ ಮತ್ತು ಭವಿಷ್ಯ ನಿಧಿ ಸೌಲಭ್ಯಗಳನ್ನು ಕಲ್ಪಿಸಬೇಕು. ಇತ್ಯಾದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net