ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಕಿತ್ತೂರು ಚನ್ನಮ್ಮ, ಬೆಳವಡಿಯ ಮಲ್ಲಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದವರ ಸ್ಮರಣೆ ಮಾಡಿಕೊಂಡ ಶಾಸಕ ಯತ್ನಾಳ್, ಇವರೆಲ್ಲ ಕೇವಲ ಒಂದು ಜಾತಿಗೆ ಸೀಮಿತರಾಗಿಲ್ಲ. ಅದರಂತೆ ಮೀಸಲಾತಿ ಎಂಬುದು ಪಂಚಮಸಾಲಿಗರಿಗಷ್ಟೇ ಸಂಬಂಧಿಸಿದ್ದಲ್ಲ, 2ಎ ಮೀಸಲಾತಿಯಲ್ಲಿ ವೀರಶೈವ ಲಿಂಗಾಯತ, ಆದಿ ಬಣಜಿಗ, ಮರಾಠ, ಕ್ಷತ್ರಿಯ, ಕ್ರಿಶ್ಚಿಯನ್, ಹಂಡೇವಜೀರ ಮತ್ತಿತರ ಜಾತಿಗಳೂ ಸೇರಿವೆ. ಇವರಲ್ಲಿ ಅರ್ಹ ಬಡವರಿಗೆ ಮೀಸಲಾತಿಯ ಲಾಭ ಸಿಗಬೇಕೆಂಬುದು ನಮ್ಮ ಹಕ್ಕೊತ್ತಾಯವಾಗಿದೆ. ಈ ಹೋರಾಟಕ್ಕೆ ತಡವಾಗಿಯಾದರೂ ನ್ಯಾಯ ಸಿಗುವುದು ನಿಶ್ಚಿತ ಎಂದರು.