ಪ್ರಾಚಾರ್ಯ ವಿ.ಜಿ. ಹೂನಹಳ್ಳಿ ಮಾತನಾಡಿ, ನಮ್ಮ ಶಾಲಾ ಆವರಣದಲ್ಲಿ ಪಾನ, ಗುಟಕಾ, ಮಾದಕ ವಸ್ತುಗಳ ನಿಷೇಧವಿದೆ. ಯಾವೊಬ್ಬ ವಿದ್ಯಾರ್ಥಿಗಳು ವ್ಯಸನಿಗಳಾಗದೆ ಉತ್ತಮ ಪ್ರಜೆಗಳಾಗಲು ಶಿಕ್ಷಣ ಪಡೆಯಬೇಕು. ಪೊಲೀಸ್ ಇಲಾಖೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿಗಳಿಗಾಗಿ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದರು. ಬೋಧಕರು, ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.