ಪ್ರವಾಹ ನಿಯಂತ್ರಣ ನಿಧಿಯಡಿ ಕಾಮಗಾರಿ, ಸಚಿವ ಎಂ.ಬಿ. ಪಾಟೀಲರಿಂದ ಪರಿಶೀಲನೆ

ವಿಜಯಪುರ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಎಂ.ಬಿ. ಪಾಟೀಲ ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಆಯುಕ್ತ ವಿಜಯ ಮೆಕ್ಕಳಕಿ ಇತರರಿದ್ದಾರೆ.
ವಿಜಯಪುರ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಎಂ.ಬಿ. ಪಾಟೀಲ ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಆಯುಕ್ತ ವಿಜಯ ಮೆಕ್ಕಳಕಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಸ್‌ಆರ್ ಅನುದಾನ ನೀಡುವ ಭರವಸೆ
  • ಮಣ್ಣು ಕುಸಿಯದಂತೆ ಕ್ರಮ ವಹಿಸಿ
  • ವಿಪತ್ತು ತಡೆಗೆ ಮುಂಜಾಗೃತೆ ವಹಿಸಿ
ವಿಜಯಪುರ: ಪ್ರವಾಹ ನಿಯಂತ್ರಣ ನಿಧಿಯಡಿ ಕೈಗೊಂಡ ಕಾಮಗಾರಿ ಸಮರ್ಪಕವಾಗಿರಬೇಕು. ಅನುದಾನ ಸದ್ಭಳಕೆ ಮಾಡಿಕೊಳ್ಳಬೇಕು. ಅಗತ್ಯಬಿದ್ದರೆ ಸಿಎಸ್‌ಆರ್ ಅನುದಾನ ನೀಡುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.
ವಿಪತ್ತು ನಿರ್ವಹಣೆ ನಿಧಿ ಸೇರಿ ವಿವಿಧ ಅನುದಾನಡಿ ನಗರದಲ್ಲಿ ಕೈಗೊಂಡ ಪ್ರವಾಹ ನಿಯಂತ್ರಣ ಕಾಮಗಾರಿಯ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ನಗರದ ಕೆಲವು ಮನೆಗಳಲ್ಲಿ ನೀರು ನುಗ್ಗಿ ಹಾನಿಯಾಗಿತ್ತು. ಇದು ಮತ್ತೆ ಪುನರಾವರ್ತನೆಯಾಗಬಾರದೆಂದೇ ಕೋಟೆ ಗೋಡೆ ಕಂದಕ ಹಾಗೂ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ವಿಜಯಪುರ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಎಂ.ಬಿ. ಪಾಟೀಲ ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಆಯುಕ್ತ ವಿಜಯ ಮೆಕ್ಕಳಕಿ ಇತರರಿದ್ದಾರೆ.

ಕಂದಕಗಳಲ್ಲಿ ಮಣ್ಣು ಕುಸಿಯಬಾರೆಂದು ಪಿಚ್ಚಿಂಗ್ ಮಾಡಲಾಗುತ್ತಿದೆ. ಈವರೆಗೆ ಇದಕ್ಕೆಂದೇ 6 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ನಗರ ಭಾಗದ ರಸ್ತೆಗಳ ಕಾಮಗಾರಿಗೆ 150 ಕೋಟಿ ಹಣ ಮಂಜೂರು ಮಾಡಲಾಗಿದೆ. ಶಿವಾಜಿ ವೃತ್ತದಿಂದ ಬಿದರಿ ಆಸ್ಪತ್ರೆಯವರೆಗೆ 3 ಕಿ.ಮೀ ಕಾಮಗಾರಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ನಗರದಲ್ಲಿ ಒಟ್ಟು 168 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು ಇಷ್ಟು ಮೊತ್ತದ ಕಾಮಗಾರಿಗಳು ಪೂರ್ಣಗೊಂಡರೆ ನಗರದಲ್ಲಿ ಕಿಂಚಿತ್ ಪ್ರವಾಹ ಬಂದರೂ ಸಮಸ್ಯೆಯಾಗದು. ಜೊತೆಗೆ ಬಿಡಿಎ ಮತ್ತು ಪಾಲಿಕೆ ಅನುದಾನದಲ್ಲಿ ಕಾಮಗಾರಿ ಭರದಿಂದ ನಡೆದಿದೆ ಎಂದರು.

ಕಾಮಗಾರಿಗಳ ವಿವರ

ಜಿಲ್ಲಾ ಸರ್ಕಾರಿ ಆಯುಷ್ ಆಸ್ಪತ್ರೆ ಹತ್ತಿರದ ಕೋಟೆ ಗೋಡೆ ಹತ್ತಿರ ಬಾಕ್ಸ್ ಕಲ್ವರ್ಟ್ ನಿರ್ಮಿಸುವುದು ಹಾಗೂ ಇತರೆ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ವಾರ್ಡ್ ನಂ. 31 ರಲ್ಲಿ ನವಭಾಗ ಮುಖ್ಯ ರಸ್ತೆಯ ಕೋಟೆ ಗೋಡೆ ಹತ್ತಿರದ ಬಾಕ್ಸ್ ಕಲ್ವರ್ಟ್‌ವರೆಗೆ ಮೊದಲ ಹಂತದಲ್ಲಿ 40ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಿಸಲಾಗುವುದು.
ವಾರ್ಡ್ ನಂ. 5 ಮತ್ತು 6 ರಲ್ಲಿ ಬರುವ ಕೆ.ಸಿ. ನಗರ, ಯಲ್ಲಾಲಿಂಗ ನಗರದಿಂದ ನಾಲಾವರೆಗೆ ಹಾಗೂ ಇತರೆ ಅವಶ್ಯಕ ಸ್ಥಳಗಳಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಿಸಲಾಗುವುದು ಎಂದರು.
ವಾರ್ಡ್ ನಂ. 34 ರಲ್ಲಿ ಬರುವ ಬಿದನೂರು ಪೆಟ್ರೋಲ್ ಪಂಪ್ ದಿಂದ ಕೋಟೆ ಗೋಡೆವರೆಗೆ 1.20ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಿಸುವುದು. ವಾರ್ಡ್ ನಂ. 27 ರ ಸಕಾಫ್ ರೋಜಾ ರಸ್ತೆಯ ಮುಬೀನ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ 64 ಲಕ್ಷ ರೂ. ವೆಚ್ಚದಲ್ಲಿ ಮಳೆನೀರು ಚರಂಡಿ ನಿರ್ಮಿಸುವುದು.
2025-26ನೇ ಸಾಲಿನಲ್ಲಿ 15ನೇ ಹಣಕಾಸು ಅನುದಾನದಡಿ 51.4 ಲಕ್ಷ ರೂ. ವೆಚ್ಚದಲ್ಲಿ ನಗರದ ಇಂಡಿ ರಸ್ತೆಯಲ್ಲಿ ಬರುವ ಎಸ್.ಟಿ.ಪಿ. ಹತ್ತಿರ (ಮೈ ಹೋಮ್) ಸಿ.ಡಿ. ಹಾಗೂ ಮಳೆ ನೀರು ಚರಂಡಿ ನಿರ್ಮಿಸುವುದು ಎಂದರು.

ಹೂಳು ತೆಗೆಯುವುದು

ರಾಜ್ಯ ಪ್ರಕೃತಿ ನಿರ್ವಹಣೆ ಅನುದಾನಡಿ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲನಿವರೆಗಿನ ಕಂದಕದಲ್ಲಿ ಮಳೆನೀರು ಸರಾಗವಾಗಿ ಹರಿಯಲು ಹೂಳು ತೆಗೆಯುವುದು ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ರೋಡಗಿ ಮಡ್ಡಿ ಸ್ಮಶಾನದಿಂದ ಸಿಂದಗಿ ರಸ್ತೆಯಲ್ಲಿರುವ ರೈಲ್ವೆ ಸೇತುವೆವರೆಗಿನ ಕಂದಕದಲ್ಲಿ ಮಳೆನೀರು ಸರಾಗವಾಗಿ ಹರಿಯಲು ಹೂಳು ತೆಗೆಯುವುದು ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿಯನ್ನು 1 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಶಹಾಪೇಟಿ ಮತ್ತು ಸುಣಗಾರ ಗಲ್ಲಿಯಿಂದ ಸ್ಟೇಷನ್ ಹಿಂದಿನ ರಸ್ತೆ ಮೂಲಕ ಅಪ್ಸರಾ ಥಿಯೇಟರ್‌ವರೆಗೆ ಮಳೆನೀರು ಚರಂಡಿ ನಿರ್ಮಿಸುವುದು ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಚರಂಡಿ ನಿರ್ಮಾಣ ಕಾಮಗಾರಿ

ವಿಜಯಪುರದ ವಿಡಿಎದಿಂದ ಸಾಯಿ ಕಾರ್ಡಿಯಾಕ್ ಆಸ್ಪತ್ರೆಯಿಂದ ಸಂಸ್ಕೃತಿ ಕಾಲನಿಯವರೆಗೆ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗೆ 5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.
ಸಿಂದಗಿ ರಸ್ತೆಯ ಪಕ್ಕದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಿಂದ ಚಾಂದನಿ ಫಂಕ್ಷನ್ ಹಾಲ್‌ವರೆಗೆ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು 1 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳಲಾಗುತ್ತಿದೆ. ಗಚ್ಚಿನಕಟ್ಟಿ ಕಾಲನಿಯಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ವಿಜಯಪುರ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಎಂ.ಬಿ. ಪಾಟೀಲ ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಆಯುಕ್ತ ವಿಜಯ ಮೆಕ್ಕಳಕಿ ಇತರರಿದ್ದಾರೆ.

ನಗರದ ಸರದಾರ ವಲ್ಲಭಭಾಯಿ ಪಟೇಲ್ ರಸ್ತೆಯ ಪಕ್ಕದಲ್ಲಿರುವ (ರಾಮನಗರ) ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಅಭಿವೃದ್ಧಿಪಡಿಸಿದ ವಸತಿ ಬಡಾವಣೆ ಹತ್ತಿರ ಇರುವ ಜಂಕ್ಷನ್ ಸುಧಾರಣೆ (ಬಸ್ ಶೆಲ್ಟರ್, ಕ್ರಾಸ್ ಡೇನ್, ಹೊರಚರಂಡಿ ಹಾಗೂ ಇತರೆ) ಅಭಿವೃದ್ಧಿ ಕಾಮಗಾರಿಗೆ 2.50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
2025-26 ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ನಗರಾಭಿವೃದ್ಧಿ ಇಲಾಖೆಯ ಅನುದಾನದಡಿ 2.95 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ನಂ. 29 ರ ಮಾಶ್ಯಾಳಕರ ಹೊಲದಿಂದ ಲಕ್ಷ್ಮಣ ನಗರ ಮೂಲಕ ರಾಮನಗರ ಹನುಮಾನ ಗುಡಿ ವರೆಗೆ ಮಳೆ ನೀರು ಚರಂಡಿ ನಿರ್ಮಾಣ ಹಾಗೂ ವಾರ್ಡ್ ನಂ. 29 ರ ಲಕ್ಷ್ಮಣ ನಗರ ಮತ್ತು ರಾಮನಗರ ಆಂತರಿಕ ರಸ್ತೆಗಳಲ್ಲಿ ಮಳೆ ನೀರು ಚರಂಡಿ ನಿರ್ಮಿಸಲಾಗುವುದು ಎಂದರು.

ನಗರ ವಿಕಾಸ ಯೋಜನೆ

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ಅಂದಾಜು ವೆಚ್ಚದ 61 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳಲ್ಲಿ ಮಳೆ ನೀರು ಚರಂಡಿ, ಅಭಿವೃದ್ಧಿ ಕಾಮಗಾರಿಗಳು ಒಳಗೊಂಡಿದ್ದು, ನಗರದ ಮೂಲಸೌಕರ್ಯವನ್ನು ಬಲಪಡಿಸುವುದು, ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಸಮಸ್ಯೆಯನ್ನು ತಗ್ಗಿಸುವುದು ಹಾಗೂ ನಾಗರಿಕರಿಗೆ ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಒಟ್ಟು 514.80 ಲಕ್ಷ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿದ್ದು, 168.45 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಮೇಯರ್ ಮಡಿವಾಳಪ್ಪ ಕರಡಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಆನಂದ ಕೆ ಹಾಗೂ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net