ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಜು. 12 ರಂದು ಸಂಜೆ 4 ಗಂಟೆಗೆ ಪ್ರಥಮ ಬಾರಿಗೆ ಐತಿಹಾಸಿಕ ನೃತ್ಯ ಪ್ರದರ್ಶನ ಪ್ರಥಮ ಪಲ್ಲವ ಕಾರ್ಯಕ್ರಮ ನಡೆಯಲಿದೆ
Published on:
Copied
Follow Us
ವಿಜಯಪುರ : ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಜು. 12 ರಂದು ಸಂಜೆ 4 ಗಂಟೆಗೆ ಪ್ರಥಮ ಬಾರಿಗೆ ಐತಿಹಾಸಿಕ ನೃತ್ಯ ಪ್ರದರ್ಶನ ಪ್ರಥಮ ಪಲ್ಲವ ಕಾರ್ಯಕ್ರಮ ನಡೆಯಲಿದೆ.
ನಾಟ್ಯ ಕಲಾ ನೃತ್ಯ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದೊಂದು ಅಪರೂಪದ ಭರತನಾಟ್ಯ ಕಾರ್ಯಕ್ರಮವಲ್ಲದೆ, ಸಂಪ್ರದಾಯ ಮತ್ತು ಸೌಂದರ್ಯದ ಸಂಗಮವಾಗಿದೆ. ನಾಟ್ಯ ಕಲಾ ಅಕಾಡೆಮಿ ವಿದ್ಯಾರ್ಥಿಗಳಾದ ರಕ್ಷಾ ಮುಚಂಡಿ. ರೇಶ್ಮಿ ಜಿ. ಮತ್ತು ಗೌರಿ ಜೋಶಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರಂಜಿತಾ ಕೆ., ಮಲ್ಲಣ್ಣ, ಶರಣು ಸಬರದ, ಸಂತೋಷ ಭೋವಿ, ಶುಭಧಾ ದೇಶಪಾಂಡೆ, ನಾಗಶ್ರೀ ಕುಲಕರ್ಣಿ, ವಿಜಯಲಕ್ಷಿ÷್ಮ ಪಟ್ಟೆದ ಆಗಮಿಸುವರು ಎಂದು ನಾಟ್ಯ ಕಲಾ ಅಕಾಡೆಮಿ ಯ ಅಧ್ಯಕ್ಷೆ ಲಕ್ಷಿ÷್ಮÃ ತೇರದಾಳಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.