ಪ್ರಗತಿಪರ ರೈತ, ಕೆಎಂಎಫ್ ಮಾಜಿ ಅಧ್ಯಕ್ಷ ಗಿರೀಶ ಚಂದಪ್ಪ ಕೊರಡ್ಡಿ ಮಾತನಾಡಿ, ರೈತರ ವಿವಿಧ ಸಮಸ್ಯೆಗಳ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಯುವ ಹಂಗಾಮಿಗೆ ಕಾರ್ಖಾನೆಗೆ ಪೂರೈಕೆ ಆಗುತ್ತಿರುವ ಕಬ್ಬಿನ ಬೆಲೆ ನಿಗದಿಪಡಿಸುವ ಕುರಿತು ಚರ್ಚೆ ನಡೆಸಿದರು.