

ಪ್ರಮುಖ ಮುಖ್ಯಾಂಶಗಳು
ವಿಜಯಪುರ: ನಗರದಲ್ಲಿ ಡಿ. 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಪರಿಸರ ಪ್ರಿಯರು, ಕ್ರೀಡಾಸಕ್ತರು ಹಾಗೂ ಗಣ್ಯರು ಸೇರಿ ಹಲವು ಸಂಘ-ಸಂಸ್ಥೆಗಳು ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದಾರೆ.ಪ್ರತಿವರ್ಷ ವೃಕ್ಷಥಾನ್ ಹೆರಿಟೇಜ್ ರನ್ ಪ್ರಖ್ಯಾತವಾಗುತ್ತಿದ್ದು, ಪ್ರಾಯೋಜಕರೂ ಸ್ವಯಂ ಪ್ರೇರಿತರಾಗಿ ಸಂತಸದಿಂದ ಹಣಕಾಸಿನ ನೆರವು ನೀಡಿದ್ದಾರೆ.ಮಾಜಿ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್ 2 ಲಕ್ಷ ರೂ., ಮುಖಂಡರಾದ ಅಬ್ದಲಹಮೀದ್ ಮುಶ್ರೀಫ್ 1.50 ಲಕ್ಷ ರೂ., ಜಮೀರ ಬಕ್ಷಿ, ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ, ವ್ಯಾಪಾರಸ್ಥರ ಸಂಘ, ಕ್ರೆಡೈ, ಅಬ್ದಲ್ ಪೀರಾ ಜಮಖಂಡಿ, ಕಿಶೋರ ಜೈನ್ ಮತ್ತು ಜಿಒಸಿಸಿ ಬ್ಯಾಂಕ್ ತಲಾ ರೂ. 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.ಅಲ್ಲದೆ, ನೆಸ್ಟಾ ಕಾರ್ಪ್ ಸೊಲೂಷನ್ಸ್ ಪ್ರೈ.ಲಿ., ಟಿ.ಆರ್. ಓಸ್ವಾಲ, ಸಂಜಯ ಗುಪ್ತಾ, ಡಾ. ಸುನೀಲ ಕಲ್ಲೂರ ತಲಾ 50 ರೂ. ಸಾವಿರ , ಮೈನೂದ್ದೀನ್ ಬೀಳಗಿ, ಸನ್ನಿ ಗವಿಮಠ, ಡಾ. ಗಂಗಾಧರ ಸಂಬಣ್ಣಿ ತಲಾ 25 ಸಾವಿರ ರೂ. ಹಾಗೂ ಮೋಯಿನ್ ಶೇಖ 10 ಸಾವಿರ ರೂಗಳನ್ನು ನೀಡಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನ ಮಾಧ್ಯಮ ಪ್ರಕಟಣೆ ತಿಳಿಸಿದೆ.