ಎಕ್ಸಲಂಟ್ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ

ಸಿದ್ಧೇಶ್ವರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ವಿಜಯಪುರದ ಎಕ್ಸಲಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲೆ ಮುಖ್ಯ ಗುರು ಎಂ.ಐ. ಬಿರಾದಾರ, ರಾಜಶೇಖರ ಕೌಲಗಿ, ಲಕ್ಷ÷್ಮಣ ಪಾಟೀಲ ಮತ್ತಿತರರಿದ್ದಾರೆ.
ಸಿದ್ಧೇಶ್ವರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ವಿಜಯಪುರದ ಎಕ್ಸಲಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲೆ ಮುಖ್ಯ ಗುರು ಎಂ.ಐ. ಬಿರಾದಾರ, ರಾಜಶೇಖರ ಕೌಲಗಿ, ಲಕ್ಷ÷್ಮಣ ಪಾಟೀಲ ಮತ್ತಿತರರಿದ್ದಾರೆ.
Published on
ವಿಜಯಪುರ : ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಭಿನವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಿದ್ಧೇಶ್ವರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಆದರ್ಶನಗರ ಬಡಾವಣೆಯ ಎಕ್ಸಲಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿದ್ದಾರೆ.
ವೈಯಕ್ತಿಕ ಆಟಗಳಲ್ಲಿ ವಿದ್ಯಾರ್ಥಿಗಳಾದ ದಿನೇಶ ಕೌಲಗಿ ತ್ರಿವಿದ ಜಿಗಿತದಲ್ಲಿ ಪ್ರಥಮ, ಪ್ರಸನ್ ಕೋಲಕಾರ 800 ಮೀ. ಓಟದಲ್ಲಿ ದ್ವೀತಿಯ ಮತ್ತು ಉದ್ದ ಜಿಗಿತದಲ್ಲಿ ತೃತೀಯ, ಸೌಜನ್ಯ ಕಲ್ಯಾಣಿ 400 ಮೀ. ಓಟದಲ್ಲಿ ದ್ವೀತಿಯ, ದೀಪಾಲಿ ಬಿಂಗೋಳಿ ತ್ರಿವಿದ ಜಿಗಿತದಲ್ಲಿ ದ್ವೀತಿಯ ಮತ್ತು ಧನುಷ ವಡ್ಡರ 800 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿಕೊಂಡಿದ್ದಾರೆ. ಇನ್ನು ಗುಂಪು ಆಟಗಳಲ್ಲಿ ವಿದ್ಯಾರ್ಥಿನಿಯರ ವಿಭಾಗದಲ್ಲಿ ವಾಲಿಬಾಲ್ ತಂಡ ದ್ವೀತಿಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ಮನ್ ಬಸವರಾಜ ಕೌಲಗಿ, ಗೌರವ ಸದಸ್ಯ ರಾಜಶೇಖರ ಕೌಲಗಿ, ಮುಖ್ಯ ಶಿಕ್ಷಕ ಎಂ.ಐ. ಬಿರಾದಾರ, ಜೆ.ಆರ್. ಗುಡ್ಡದ, ಎಂ.ಪಿ. ಬೇವಿನಗಿಡದ, ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ÷್ಮಣ ಪಾಟೀಲ, ಭಾರತಿ ಕಪ್ಪೇನವರ ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net