ಹಸಿರು ತೋರಣ ಬಳಗದಿಂದ ಪರಿಸರ ಸಂರಕ್ಷಣೆ

ಮುದ್ದೇಬಿಹಾಳ ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಭುಗೌಡ ದೇಸಾಯಿ, ಪ್ರಭುರಾಜ ಕಲಬುರ್ಗಿ, ಶ್ರೀಕಾಂತ ಚಲವಾದಿ, ಮಹಾಬಲೇಶ್ವರ ಗಡೇದ, ಅಮರೇಶ ಗೂಳಿ, ಬಸವರಾಜ ಬಿಜ್ಜೂರ, ಸೋಮಶೇಖರ ಚೀರಲದಿನ್ನಿ ಇತರರಿದ್ದಾರೆ.

Published on
ಮುದ್ದೇಬಿಹಾಳ : ಹಸಿರು ತೋರಣ ಗೆಳೆಯರ ಬಳಗ ಪರಿಸರ ಉಳಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಸಣ್ಣದಲ್ಲ, ಅದು ಭವಿಷ್ಯದಲ್ಲಿ ಜನರಿಗೆ ಗೊತ್ತಾಗುತ್ತದೆ ಎಂದು ವಿಜಯಪುರ ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ ಬುಧವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಇಂದಿನ ಅತ್ಯವಶ್ಯ ಜವಾಬ್ದಾರಿ ಆಗಿದೆ. ಹಸಿರು ತೋರಣ ಬಳಗದ ಸದಸ್ಯರು ಯಾವುದೇ ಪ್ರತಿ-ಫಲ ನಿರೀಕ್ಷಿಸದೇ, ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದರೆ ಎಂದರು.
ಸದಸ್ಯರು ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು ನೀರೆರೆದರು. 
ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕರ್ನಾಟಕ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಉಪಾಧ್ಯಕ್ಷ  ಶ್ರೀಕಾಂತ ಚಲವಾದಿ ಹಾಗೂ ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಮಹಾಬಲೇಶ್ವರ ಗಡೇದ ಅವರನ್ನು ಸನ್ಮಾನಿಸಲಾಯಿತು.
ಅಮರೇಶ ಗೂಳಿ, ಬಸವರಾಜ ಬಿಜ್ಜೂರ, ಸೋಮಶೇಖರ ಚೀರಲದಿನ್ನಿ, ವಿಲಾಸರಾವ್ ದೇಶಪಾಂಡೆ, ಬಿ.ಎಸ್. ಮೇಟಿ, ಅಶೋಕ ರೇವಡಿ, ನಾಗಭೂಷಣ ನಾವದಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net