ಇತಿಹಾಸಕಾರ ಡಾ. ಆನಂದ ಜೆ. ಕುಲಕರ್ಣಿ ಮಾತನಾಡಿ, ಬಸವನಾಡು, ಗುಮ್ಮಟ ನಗರಿ ಮುಂತಾದ ಹೆಸರುಗಳಿಂದ ಖ್ಯಾತವಾಗಿರುವ ವಿಜಯಪುರ ದಕ್ಷಿಣದ ಕಾಶಿ ಎಂದೇ ಹೆಸರಾಗಿತ್ತು. ಶರಣರ ನಾಡು, ಸೂಫಿ ಸಂತರ ಬೀಡು, ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಜನ್ಮ ಮತ್ತು ಕರ್ಮಭೂಮಿಯಾದ ಈ ನೆಲ ಸದಾ ಬಾಂಧವ್ಯಕ್ಕೆ ಮಾದರಿಯಾಗಿದೆ. ಕನ್ನಡದ ಮೊದಲ ರಾಮಾಯಣವೂ ಕೃತಿ ಇಲ್ಲಿಯೇ ರಚಿತವಾಗಿದೆ ಎಂದು ತಿಳಿಸಿದರು.