ಸಮಾಜದ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣ ಅತ್ಯವಶ್ಯ

ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ರಾಜ್ಯಮಟ್ಟದ ಮಹಿಳಾ ಯುವಜನೋತ್ಸವ ಕಾರ್ಯಕ್ರಮವನ್ನು ಡಾ. ಜಾವೀದ ಜಮಾದಾರ ಉದ್ಘಾಟಿಸಿದರು. ವಿಜಯಾ ಕೋರಿಶೆಟ್ಟಿ, ಭವಾನಿ ಅಲಗೂರ, ಶಂಕರಗೌಡ ಸೋಮನಾಳ ಮತ್ತಿತರರಿದ್ದಾರೆ.
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ರಾಜ್ಯಮಟ್ಟದ ಮಹಿಳಾ ಯುವಜನೋತ್ಸವ ಕಾರ್ಯಕ್ರಮವನ್ನು ಡಾ. ಜಾವೀದ ಜಮಾದಾರ ಉದ್ಘಾಟಿಸಿದರು. ವಿಜಯಾ ಕೋರಿಶೆಟ್ಟಿ, ಭವಾನಿ ಅಲಗೂರ, ಶಂಕರಗೌಡ ಸೋಮನಾಳ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿಕೆ
  • ಎನ್‌ಎಸ್‌ಎಸ್ ರಾಜ್ಯಮಟ್ಟದ ಮಹಿಳಾ ಯುವಜನೋತ್ಸವ
ವಿಜಯಪುರ: ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣ ಅತ್ಯವಶ್ಯಕವಾಗಿದೆ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಮುಂದಾಗಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ರಾಜ್ಯಮಟ್ಟದ ಮಹಿಳಾ ಯುವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶವನ್ನು ಅಭಿವೃದ್ಧಿಪಡಿಸುವಲ್ಲಿ ನಾವೆಲ್ಲರೂ ಒಂದು ಹೆಜ್ಜೆ ಮುಂದೆ ಇಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ತ್ರೀ ಸಂಬಧಿಂತ ವಿಷಯಗಳ ಬಗ್ಗೆ ಸಮಾಜದಲ್ಲಿ ಸಮಗ್ರ ಜಾಗೃತಿ ಮೂಡಿಸುವ ಅಗತ್ಯವಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಪಡೆದು ಮುನ್ನಡೆಯಲು ಸಾಧ್ಯವಾಗುವಂತೆ ಪ್ರೋತ್ಸಾಹ ನೀಡಬೇಕು. ಮಹಿಳಾ ಸಬಲೀಕರಣವು ಕೇವಲ ಕುಟುಂಬದಷ್ಟೇ ಅಲ್ಲ, ಸಮಗ್ರ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯ ಜಾವೀದ ಜಮಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ, ಯುವಜನತೆ ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೆ ಬದಲಿಸಬಹುದು. ಬದಲಾದ ಜೀವನ ಶೈಲಿ ಒತ್ತಡಗಳಿಂದ ಜೀವನ ಮೌಲ್ಯಗಳು ಅಪಾಯದ ಅಂಚಿಗೆ ಸರಿಯುತ್ತಿದ್ದು, ಯುವಕರು ದೇಶದ ಭವ್ಯ ಸಂಸ್ಕೃತಿಯಿಂದ ವಿಮುಖವಾಗಬಾರದು ಎಂದು ಸಲಹೆ ನೀಡಿದರು.
ಯುವ ನಾಯಕಿ ಭವಾನಿ ಆಲಗೂರ ಮಾತನಾಡಿದರು. ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಬಸವರಾಜ ಲಕ್ಕಣ್ಣವರ, ಕೃಷ್ಣಾ ಕೆ.ಎಚ್., ಆರ್.ಸಿ. ಪಾಟೀಲ, ರಾಜಕುಮಾರ ಮಾಲಿಪಾಟೀಲ, ಅಶೋಕ ಸುರಪುರ ಮತ್ತಿತರರಿದ್ದರು.
ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರಕಾಶ ಸಣ್ಣಕ್ಕನವರ ಸ್ವಾಗತಿಸಿದರು, ಕಲಾವತಿ ಕಾಂಬಳೆ ಪರಿಚಯಿಸಿದರು. ಸಲಮಾ ಮಳಗಿ ನಿರೂಪಿಸಿದರು. ಭಾಗ್ಯಶ್ರೀ ದೊಡ್ಡಮನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net