2026-27ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ನೋಂದಣಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಅವಕಾಶ ನೀಡಲಾಗಿತ್ತು. 2026 ಫೆ. 3 ರಿಂದ ಮೇ 30ರವರೆಗೆ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು. ಮುಂದುವರಿದು ಜು. 15ರವರೆಗೆ ಕಾಲಮಿತಿ ವಿಸ್ತರಿಸಲಾಗಿತ್ತು. ಈ ವೇಳೆ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ನಿರ್ವಹಿಸುತ್ತಿರಬೇಕಾದರೆ, ಆನ್‌ಲೈನ್‌ನಲ್ಲಿ ಅರ್ಜಿ ತಿರಸ್ಕರಿಸಿದರೂ ಡಿಡಿಪಿಐ ಲಾಗಿನ್ ದುರುಪಯೋಗಪಡಿಸಿಕೊಂಡು 16 ಶಾಲೆಗಳಿಗೆ ಅನಧಿಕೃತವಾಗಿ ಅನುಮೋದನೆ ನೀಡಲಾಗಿದೆ. ಈ ಕುರಿತು ದೂರು ದಾಖಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ.