ಡಾ. ಅಣ್ಣಾಭಾವು ಸಾಠೆ ಹೆಸರು ನಾಮಕರಣಕ್ಕೆ ಆದೇಶ

ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ
Published on

ವಿಜಯಪುರ:

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪ್ರಯತ್ನದಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮಾರ್ಗದಲ್ಲಿರುವ ವೃತ್ತಕ್ಕೆ ಲೋಕ ಶಾಹೀರ ಡಾ. ಅಣ್ಣಾಭಾವು ಸಾಠೆ ಹೆಸರು ನಾಮಕರಣಗೊಳಿಸಿ, ನಗರಾಭಿವೃದ್ಧಿ ಇಲಾಖೆಯ ಅಽÃನ ಕಾರ್ಯದರ್ಶಿಗಳು ಗುರುವಾರ ಆದೇಶಿಸಿz್ದÁರೆ.

ಡಾ. ಬಿ.ಆರ್. ಅಂಬೇಡ್ಕರ್ ಮಾರ್ಗದಲ್ಲಿ ಬರುವ ಪೂರ್ವಕ್ಕೆ ವಾಲ್ಮೀಕಿ ವೃತ್ತ, ಪಶ್ಚಿಮಕ್ಕೆ ಕನಕದಾಸ ವೃತ್ತ, ಉತ್ತರಕ್ಕೆ ಬಸರಿ ಕಮಾನಕ್ಕೆ ಹೋಗುವ ರಸ್ತೆ, ದಕ್ಷಿಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಜಿ¯್ಲÁ ಕ್ರೀಡಾಂಗಣದ ಚಕ್ಕ ಬಂದಿಯ ಮಧ್ಯದಲ್ಲಿ ಬರುವ ಮೀನುಗಾರಿಕೆ ಇಲಾಖೆಯ ಎದುರಿನ ಸ್ಥಳಕ್ಕೆ ಡಾ. ಅಣ್ಣಾಭಾವು ಸಾಠೆ ಹೆಸರು ನಾಮಕರಣಗೊಳಿಸಲಾಗಿದೆ.
ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು, ಈಗಾಗಲೇ ನಗರದ ಪ್ರಮುಖ ವೃತ್ತಗಳಿಗೆ ಹಾಗೂ ಮಾರ್ಗಗಳಿಗೆ ಮಹಾನ್ ವ್ಯಕ್ತಿಗಳು, ಸ್ವಾತಂತ್ರ‍್ಯ ಹೋರಾಟಗಾರರು, ಸಾಧಕರು, ಮಹಾತ್ಮರು ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸಲು ಮತ್ತು ಮುಂದಿನ ಪೀಳಿಗೆಗೆ ಸೂರ್ತಿ ನೀಡುವ ಮಹತ್ತರ ಉದ್ದೇಶದಿಂದ ದೇಶಕ್ಕಾಗಿ ಕೊಡುಗೆ ನೀಡಿದವರ ಹೆಸರುಗಳನ್ನು ನಾಮಕರಣಗೊಳಿಸಿz್ದÁರೆ. ಸದ್ಯ ಸಮಾಜ ಸುಧಾರಕ, ಜಾನಪದ ಕವಿ ಹಾಗೂ ದಲಿತ ಸಾಹಿತ್ಯದ ಸ್ಥಾಪಕ ಲೋಕ ಶಾಹೀರ ಡಾ. ಅಣ್ಣಾಭಾವು ಸಾಠೆ ಅವರ ಹೆಸರನ್ನು ನಾಮಕರಣಗೊಳಿಸುವ ಮೂಲಕ ಗೌರವ ಸಲ್ಲಿಸುವ ಮಹತ್ಕಾರ್ಯ ಮಾಡಿz್ದÁರೆ ಎಂದು ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net