ಸಮಾಜದ ಒಳತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಸಮುದಾಯದ ಅಂಕು-ಡೊಂಕುಗಳನ್ನು ತಿದ್ದಿ-ತೀಡಿ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಸಾಗಿ ಸಮಾಜ ಸುಧಾರಣೆ ಮಾಡುವಲ್ಲಿ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಭೀಮರಾವ್ ಅವರನ್ನು ದಲಿತ ಸಮುದಾಯಕ್ಕೆ ಸೀಮಿತಗೊಳಿಸಬೇಡಿ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಬೂದಿಹಾಳ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಕಾರ್ಯಕ್ರಮ ಅವರು ಮಾತನಾಡಿದರು.
ಅಂಬೇಡ್ಕರ್ ದಲಿತ ಸಮುದಾಯ ಒಂದಕ್ಕೆ ಸಿಮಿತವಾಗದೇ ಸರ್ವ ಜನರ ಹಕ್ಕು ಕಾಪಾಡುವ ಸಂವಿಧಾನವನ್ನು ಬರೆದು ಇಡೀ ಭಾರತಕ್ಕೆ ಶಾಂತಿಯ ಜೀವನ ನಡೆಸಲು ದಾರಿ ದೀಪವಾದ ಇವರು. ಪ್ರತಿ ಮನೆ-ಮನೆಯಲ್ಲಿ ಅವರ ಆದರ್ಶ ಅವಳಡಿಸಿಕೊಂಡಾಗ ಮಾತ್ರ ಅಂಬೇಡ್ಕರ ಜೀವನಕ್ಕೆ ಶಾಂತಿ ದೊರೆಯಲಿದೆ ಎಂದರು.
ಜಿಲ್ಲಾ ಸಂಚಾಲಕ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಕಾಂಗ್ರೆಸ್ ಮುಖಂಡ ಅಶೋಕಗೌಡ ಪಾಟೀಲ ಜೆಡಿಎಸ್‌ನ ಗುರನಗೌಡ ಪಾಟೀಲ, ಬೂದಿಹಾಳ ಹಿರೇಮಠದ ಶಿವಾನಂದಯ್ಯ ಹಿರೇಮಠ, ಮಲ್ಲಯ್ಯ ಗಣಿಮಠ ಮತ್ತಿತರರಿದ್ದರು.