ಒಡಲ ಧ್ವನಿ ಮಹಿಳಾ ಒಕ್ಕೂಟದಿಂದ ಮಹಿಳೆಯರು ಬೆಳೆದ ಜೋಳ, ಸಜ್ಜೆ, ಹಾಗೂ ಶೇಂಗಾ ಬಳಸಿದ ಮೌಲ್ಯವರ್ಧಿತ ಆಹಾರ ಉತ್ಪನ್ನಗಳಾದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಶೇಂಗಾ ಹೋಳಿಗೆ, ಶೇಂಗಾ ಉಂಡೆ ಹಾಗೂ ಜೋಳದ ದಪಾಟಿಯನ್ನು ತಯಾರಿಸುತ್ತಿದ್ದು, ಈ ಉತ್ಪನ್ನಗಳನ್ನು ಬೆಂಗಳೂರಿನ ಪ್ರಸಿದ್ಧ ಸಾವಯವ ಮತ್ತು ಸುಸ್ಥಿರ ಸಂತೆ ’ರಾಗಿಕಣ’ದಲ್ಲಿ ಮಾರಾಟ ಮಾಡಲು ತೆರಳುತ್ತಿದ್ದರು.